ನಮ್ಮ ಆಚರಣೆಗಳು - ಸಂಜೆಯ ರೂಡಿಗಳು

         ಮೊನ್ನೆ ಶನಿವಾರ ಸಂಜೆ ನನ್ನ ಒಬ್ಬ ಗೆಳೆಯ, ಲೇ ಸೂಜಿ ತೊಗೋಬೇಕು ಬಾ ಅಂಗಡಿಗೆ ಹೋಗೋಣ ಅಂದಾ . ನನ್ನ ಜೋತೆ ಇದ್ದ ಇನ್ನೊಬ್ಬ ಲೋ ಸಂಜೆ ಹೊತ್ತು ಸೂಜೆ ಮಾರಲ್ಲ ಅಂದ .ಲೇ ನೋಡೋಣ ನಡಿಲೆ ಅಂತಾ ಒತ್ತಾಯ ಮಾಡಿ ಅವನನ್ನ ಕರ್ಕೊಂಡು ಹೋದಾ. ಸ್ವಲ್ಪ ಹೊತ್ತಿನ ನಂತರ ಇಬ್ಬರು market ಇಂದ ತರಕಾರಿ, ಅದರಲ್ಲೂ ಒಳ್ಳೆ ಗಜ್ಜರಿ ಏನೂ ತೊಗೊಂಡು ಬಂದಿದ್ದರು, ಆದ್ರೆ ಸೂಜಿ ಮಾತ್ರ ಸಿಕ್ಕಿರಲಿಲ್ಲ, ಅಲ್ಲ ಅಂಗಡಿಯವನು ಇವರಿಗೆ ಕೊಟ್ಟಿರಲಿಲ್ಲ .
          ಇದು ನಾನು ಹೇಳ್ತಿರೋದು hi-tech city  ನಮ್ಮ ಬೆಂಗಳೂರಲ್ಲಿ . ನನಗೆ ನಂಬೋಕೆ ಆಗ್ಲಿಲ್ಲ. ಇಗಲು ಇದನ್ನ ಪಾಲಿಸ್ತಾರ?  ಅದರಲ್ಲೂ ಇಲ್ಲಿ ಬೆಂಗಳೂರಲ್ಲಿ ..??
         ನಾವು ಎಷ್ಟೇ ಮುಂದುವರೆದರು ಕೆಲವೊಂದು ಸಂಸ್ಕಾರಗಳನ್ನ ಇನ್ನು ಮುಂದುವರೆಸಿಕೊಂಡು ಬಂದಿದಿವಿ ...ಒಂದು ರೀತಿಲಿ ಇದು ಒಳ್ಳೇದು...
ಚಿಕ್ಕವನಿದ್ದಾಗ ಅಮ್ಮನು ಅಂತಿದ್ಲು ಸಂಜೆ ಹೊತ್ತು ಸೂಜೆ, ಉಪ್ಪು ಎಣ್ಣೆ ಎನನ್ನು ಮನೆ ಇಂದ ಹೊರಗೆ ತೊಗೊಂಡು ಹೋಗಬಾರದು ಅಂತಾ . 
ನಮ್ಮ ಊರಿನ ಕಡೆ, ತುರ್ತಾಗಿ ಬೇಕಿರುವ ವಸ್ತುಗಳು ಮನೆಯಲ್ಲಿ ಇರದಿದ್ರೆ ಪಕ್ಕದಮನೆಯವರ ಹತ್ರ ಎರವಲು [ನಾವು ಕಡ ಅಂತಾ ಅಂತಿವಿ ] ತೆಗೆದುಕೊಳ್ಳುವದು ರೂಡಿಯಲ್ಲಿದೆ. ಕೆಲವೊಮ್ಮೆ ಪಕ್ಕದಮನೆಯವರು ಯಾರಾದ್ರೂ ಸಂಜೆ ಸೂಜಿ ಬೇಕು ಅಂತಾ ಬಂದಾಗ ಅಮ್ಮ, ನಾವು ಸಂಜೆ ಹೊತ್ತು ಸೂಜಿ ಕೊಡಲ್ಲ .. ಸ್ವಲ್ಪ ಮುಂಚೆನೇ ಬರೋದಲ್ವ ಅಂತಾ ಅಂದ್ದಿದ್ದು ನನಗೆ ಇನ್ನೂನೆನಪಿದೆ .. ಯಾಕಮ್ಮ ಸಂಜೆ ಕೊಡಬಾರದು 
ಅಂತಾ ಕೇಳಿದ್ರೆ, ಅದು ಮುಂಚೆ ಇಂದ ಇರೋ ಪದ್ಧತಿ ಅನ್ನೋ ಉತ್ತರಾ ಸಿಕ್ಕಿತ್ತು. ನನ್ನಲ್ಲಿ ಆ ಪ್ರಶ್ನೆ ಹಾಗೆ ಉಳಿತು...
          ಆಮೇಲೆ ಆಮೇಲೆ ಅನಸಿದ್ದು ಏನಂದ್ರೆ , ಸೂಜಿ ತುಂಬಾ ಚಿಕ್ಕ ವಸ್ತು... ಎಲ್ಲಾದರು ಬಿದ್ದೋದ್ರೆ ಹಗಲಲ್ಲೇ ಸಿಗೋದು ಕಷ್ಟ ಇನ್ನು ಸಂಜೆ ಹೊತ್ತು ಅಂತು ಅದನ್ನ ಹೊಡುಕೊದು ವ್ಯರ್ತ . ಯಾರದಾದರು ಕಾಲಿಗೆ ಚುಚ್ಚಿ ಬಿಟ್ರೆ ??? ನೀವು ಅನ್ನಬಹುದು ನಾವು ಚಪ್ಪಲಿ ಹೊಕೊಂದಿರ್ತಿವಿ ಬಿಡು ಅಂತಾ . ಆದ್ರೆ ಹಿಂದಿನ ಕಾಲದಲ್ಲಿ ಬರಿಗಾಲಲ್ಲೆ ಓಡಾಡ್ತಾ ಇದ್ರೂ ಜನ .ಇದರಿಂದನೇ ಏನೂ ಸಂಜೆ ಹೊತ್ತು ಸೂಜಿ ಹೊರಗಡೆ ತೊಗೊಂಡು ಹೋಗೋದಕ್ಕೆ ಬಿಡಲ್ಲ ... 
            ಇನ್ನು ಎಣ್ಣೆ ವಿಷಯಕ್ಕೆ ಬಂದ್ರೆ [ನಾನಿಲ್ಲಿ ಹೇಳ್ತಿರೋದು edible oil ಬಗ್ಗೆ], ಸಂಜೆ ಹೊತ್ತು ಎಲ್ಲಾದರು ಯಾರಾದ್ರೂ ಚೆಲ್ಲಿಕೊಂಡು ಹೋದ್ರೆ, ಬೇರೆಯವರು ಅದನ್ನ ನೋಡ್ದೆ ಕಾಲಿಟ್ಟು ಜಾರಿ ಬೀಳಬಹುದು ಅಂತಾ ..ಆದ್ರೆ ಇದನ್ನ ಜನ ಅಷ್ಟೊಂದು ಪಾಲಿಸಲ್ಲ . ಬೇರೆ ಎಣ್ಣೆ [ off-course  ಅದು ಕೂಡ  edible ಆಯಿಲ್] ಸಂಜೆ ಹೊತ್ತೇ ಜಾಸ್ತಿ ಮಾರಾಟ ಆಗತ್ತೆ ಅಲ್ವ , ಬಹುಶ ಎಲ್ಲಾ ಎಣ್ಣೆ ಒಂದೇ ಅನ್ನೋ ಭಾವನೆ ಇರಬಹುದು,ಅದು ಬೇರೆ ಮಾತು .. 
        ಆದ್ರೆ ಉಪ್ಪನ್ನ ಯಾಕೆ ಸಂಜೆ ಕೊಡಬಾರದು ಅನ್ನೋ ವಿಷಯ ನನಗೂ ಇನ್ನು ಗೊತ್ತಾಗಿಲ್ಲ .. ಯಾರಿಗಾದರು ಗೊತ್ತಿದ್ರೆ ತಿಳಿಸಿ.
        ಇನ್ನು ಒಂದು ನಾನು ಗಮನಿಸಿದ್ದು ಅಂದರೆ ಸಂಜೆ ಹೊತ್ತು ಗಿಡದ ಎಲೆಗಳನ್ನ, ಹೂವುಗಳನ್ನ ಕಿಳ್ಬಾರ್ದು ಅಂತಾರೆ . ಬಹುಶ, ಸಂಜೆ ಕತ್ತಲಲ್ಲಿ ಕೀಟಗಳು ಅಥವಾ ಪಕ್ಷಿಗಳು ಗಿಡದಲ್ಲಿ ಇರುತ್ತವೆ ಅವುಗಳಿಗೆ ತೊಂದರೆ ಆಗಬಾರದು ಅಂತಾ, ಮತ್ತು ಕೆಲ ವಿಷ ಜಂತುಗಳು ಗಿಡದಲ್ಲಿ ಇರೋದು ಕತ್ತಲಲ್ಲಿ ಕಾಣೋದೆ ಇಲ್ಲ. ಇದರಿಂದ ನಮಗೂ ತೊಂದರೆ ಆಗಬಹುದು. ಅದಕ್ಕೆ ಸಂಜೆ ಹೊತ್ತು ಎಲೆಗಳನ್ನ, ಹೂವುಗಳನ್ನ ಕಿಳಬೇಡಿ ಅಂತಾ ಹೇಳಿರಬಹುದು.
ಇಷ್ಟೆಲ್ಲಾ ಮುಂದಾಲೋಚನೆ ಮಾಡಿ ಅಥವಾ ಆಗಿರೋ ಅನಾಹುತದಿಂದ ಪಾಠ ಕಲಿತು ಇಂತಹ ಎಷ್ಟೋ ಆಚರಣೆಗಳು ನಮ್ಮ ಸಮಾಜದಲ್ಲಿ ರೂಡಿಯಲ್ಲಿವೆ. ಇವುಗಳ್ಳನ್ನು ಇಂತಹ ವ್ಯಕ್ತಿನೇ ಆಚರಣೆಗೆ ತಂದರು  ಅನ್ನೋ ಯಾವುದೇ ದಾಖಲೆಗಳು ಇಲ್ಲ.. ಯಾರೇ ಮಾಡಿರಲಿ ಇವುಗಳಿಂದ ನಮಗೆ ಒಳ್ಳೆಯದೇ ಆಗ್ತಿದೆ ..  

Comments

  1. ಒಳ್ಳೆಯ thought-provoking ಲೇಖನ.. ನಾವು ಮೂಢ-ನಂಬಿಕೆ ಎಂದು ಹೇಳಿ ಬದಿಗೊತ್ತುವ ಎಷ್ಟೋ ವಿಷಯಗಳು ನಮ್ಮ ಹಿರಿಯರ ಅನುಭವಗಳ ಸಾರವಾಗಿರುತ್ತವೆ. ಅವು ನಮ್ಮ ಮೌಢ್ಯದಿಂದ ನಮ್ಮ ಅರಿವಿಗೆ ಬಂದಿರದವಾಗಿರುತ್ತವೆ.

    ReplyDelete
  2. :) Ella aacharanegu Ondu olle karana/uddesha iruthe.

    Kelavu Kela-samayakke, kela-prakrithige hondhikondiruthave.

    Artha/vidhana thilkondre ella aacharanegalu vishesha matthe hosa thara!!

    ReplyDelete
  3. @harish and Lovelife: Thank u for ur comment..
    ನಮಗೆ ತಿಳಿಯದ ಇನ್ನೂ ಎಷ್ಟೋ ವಿಷಯಗಳು/ಆಚರಣೆಗಳು ಇವೆ .ಅವುಗಳ ಸರಿಯಾದ ಮಹತ್ವ ಅರಿಯದೆ ನಾವು ಮೂಢ ನಂಬಿಕೆ ಎಂದು ಉದಾಸಿನ ಮಾಡಿಬಿಟ್ಟಿರುತ್ತೇವೆ.

    ReplyDelete

Post a Comment

Popular posts from this blog

ಹಲೋ ಮೇಡಂ ! ಚೆನ್ನಾಗಿದಿರಾ ?

ಹಲೋ !!! TeaYa ನಾ???

Whom to contact....???