Posts

Showing posts with the label ಹಳೇ ನೆನಪುಗಳು

ಹಲೋ ಮೇಡಂ ! ಚೆನ್ನಾಗಿದಿರಾ ?

ಕೊಟ್ರೇಶಿ !!! ಅಲ್ಲ ಸರ್ ಅದು ಕಲ್ಲೇಶಿ... Present  ಸರ್  ...ಅಂತ ನಮ್ಮ ಕಲ್ಲೇಶಿ ನಗ್ತಾ ಹೇಳಿದ :) ಹಾ ಹಾ ಅಂತ  ನಾವೆಲ್ಲಾ ನಗತಿದ್ವಿ .... ಒಹ್ ಸಾರೀ ಸಾರೀ  .. Silence ಅಂತ ನಮ್ಮ lecture ಕೂಗಿ ಮತ್ತೆ ತಮ್ಮ ಎಂದಿನ ರೀತಿ ಅಲ್ಲಿ attendence ತೊಗೊಲೋದನ್ನ ಮುಂದುವರೆಸಿದರು. ಅದು ಆದ್ಮೇಲೆ ಅವರ usual style ಅಲ್ಲಿ , 'lathe is mother machine which makes other machine '  ಅಂತ ಪಾಠ ಶುರು ಮಾಡಿದ್ರು. ನಾವೆಲ್ಲಾ as usual full interest ಇಂದ ಪಾಠ ಕೇಳ್ತೈದ್ವಿ [please ನಗಬೇಡಿ ನಾನ seroious ಆಗಿ ಹೇಳ್ತಿದೀನಿ].      *** ಅದು ನಮ್ಮ engineering ನ ಮೊದಲ ವರ್ಷ. ಕ್ಲಾಸ್ ಶುರು ಆಗಿ ಎರಡು ತಿಂಗಳಾದ್ರೂ ಇನ್ನು ಜನ mutual exchange ಅಂತ ಬರ್ತಾನೆ ಇದ್ರೂ ಕ್ಲಾಸಗೆ. ಅದೇ ತರ ನಮ್ಮ ಕಲ್ಲೇಶಿ ಕೂಡ ಹೊಳೆ ಆಚೆ ಇಂದ ಈಚೆಗೆ ಬಂದಿದ್ದ. ಪಾಪ !!!!! ಪಾಪ ಯಾಕೆಂದ್ರೆ, ಹೊಳೆ ಆಚೆ ಅವರ ಊರು. ಊರಿಗೆ ಹತ್ರನೇ ಮುಂಚೆ ಇದ್ದ ಕಾಲೇಜ್. ನಮ್ಮ college ಬರಬೇಕು ಅಂದ್ರೆ ಪಾಪ ಅವನು ಸೈಕಲ್ ತುಳಕೊಂಡು ಹರಿಹರದ ವರೆಗೆ ಬಂದು ಅಲ್ಲಿಂದ bus ಅಲ್ಲಿ ದಾವಣಗೆರೆಗೆ ಬರಬೇಕಿತ್ತು. ಹ್ಮ್ಮ್ಮ್ ..... cycle ತುಳಿಯೋ ಕಷ್ಟ ಗೊತ್ತಾದಮೇಲೆ ಅವನಿಗೆ ಹೊಸ ಹೊಸ ವಿಚಾರಗಳು/ಯೋಚನೆಗಳು ಬರತೊಡಗಿದವು. ಅದರಲ್ಲಿ ಒಂದು ಅಂದ್ರೆ cycle ನೆ modify ಮಾ...

ಹಲೋ !!! TeaYa ನಾ???

Image
       ಬಿಡು ಮಗಾ ಅವಳು ನಿನಗೆ message ಮಾಡಲ್ಲ ಅಂತಾ ಕುಮಾರ ಹರಿ ಗೆ ಹೇಳಿದ. ನಾವೆಲ್ಲಾ 2nd period ನಡಿಲಿಲ್ಲ ಅಂತಾ ನಮ್ಮ so called ಸೋಮಾರಿ ಕಟ್ಟೆ ಹತ್ರ ಕೂತು ಹರಟೆ ಹೊಡಿತಿದ್ವಿ. ಆದ್ರೆ ಹರಿ ತುಂಬಾ ಬೇಜಾರಾಗಿದ್ದ. ಕುಮಾರ ಅವಳ ಬಗ್ಗೆ ಹೇಳಿದಾಗ ಅಲ್ಲಿ ಒಂದು ಕ್ಷಣ ಮೌನ.                                                                        *****        ಆಗಷ್ಟೇ mobile ಕ್ರಾಂತಿ ಶುರು ಆಗಿತ್ತು. ನಮ್ಮಲ್ಲಿ ಬೆರಳೆಣಿಕೆ ಅಸ್ಟು ಜನರಲ್ಲಿ ಮಾತ್ರ ಮೊಬೈಲ್ ಇತ್ತು.ಅವತ್ತು ಹರಿ full excite ಆಗಿ ಮಗಾ spice call rate 10 ಪೈಸೆ ಪ್ರತಿ ನಿಮಿಷಕ್ಕೆ ಮತ್ತೆ ನೂರು message free ಪ್ರತಿ ದಿನಕ್ಕೆ ಅಂತಾ ಕುಮಾರನಿಗೆ ಹೇಳ್ತಿದ್ದಾ. ನಾವೆಲ್ಲಾ ಹೌದೇನೋ ?? ಅಂತಾ ಪಿಳಿ ಪಿಳಿ ಕಣ್ಣು ಬಿಟ್ಟಕೊಂಡು ಅವನ ಹೊಸ ಮೊಬೈಲ್ ನೋಡ್ತಿದ್ವಿ. ಹರಿ,ಪ್ರಕಾಶ,ನಂದನ,ಕುಮಾರ,ಮತ್ತೆ ಮುನ್ನ ತುಂಬಾ close friends.  ಸುಮಾರು ಒಂದು ತಿಂಗಳ ನಂತರ ಹರಿ ಗೆ ಒಂದು unknown number ಇಂದ ಮೆಸೇಜ್ ಬಂತು. ಅದು ಏನಪ್...

World Cup : ನೆನಪಿನ ಅಂಗಳದಿಂದ !!!

Image
  Photo courtesy: Internet Edited by Me .          ಕ್ರಿಕೆಟ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲಾ ? ಕ್ರಿಕೆಟ್ ಬಗ್ಗೆ ಏನು ಗೊತ್ತಿಲ್ಲದವರು ಸಹ ಪಂದ್ಯ ನಡಿತಿದ್ರೆ ಸ್ಕೋರ್ ಎಷ್ಟು? ಅಂತಾ ಎಷ್ಟೋ ಸಲ ಕೇಳಿರ್ತಾರೆ ಅಲ್ವಾ?          ಇನ್ನೂ ಭಾರತ ಮತ್ತು ಪಾಕಿಸ್ತಾನ ನಡುವೆ ಎಂದರು ಪಂದ್ಯ ಇದ್ರೆ ಅದರ ಮಾತೆ ಬೇರೆ, ಕ್ರಿಕೆಟ್ ಕಂಡ್ರೆ ಆಗಲ್ಲ ಅನ್ನೋರು ಸಹ ಉತ್ಸುಕರಾಗಿರ್ತಾರೆ.          ಚಿಕ್ಕಂದಿನಿಂದ ನನಗೆ ಕ್ರಿಕೆಟ್ ಬಗ್ಗೆ ಆಸಕ್ತಿ .ಚಿಕ್ಕಂದಿನಲ್ಲಿ ನಾನು ಹೆಚ್ಚಿನ ಸಮಯ ಕಳೆದದ್ದು ನನ್ನ ಅಜ್ಜನ ಮನೇಲಿ. 1983 ರಲ್ಲಿ ಭಾರತ ವರ್ಲ್ಡ್ ಕಪ್ ನ ಫೈನಲ್ ಪ್ರವೇಶಿಸಿದಾಗ ಅಜ್ಜ ಟಿವಿ ತೊಗೊಂಡಿದ್ದರಂತೆ. ನನ್ನ ಮಾವ ದಿನಾಲೂ ಕ್ರಿಕೆಟ್ ಆಡೋಕೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗ್ತಿದ್ರು. ಆಮೇಲೆ ಒಂದು tournament ಅಲ್ಲಿ ಬಾಲ್ ಬಡಿದು ಕಾಲಿಗೆ ಗಾಯ ಮಾಡಿಕೊಂಡಾಗ,ಅಜ್ಜಿ ಸರಿಯಾಗಿ ಮಂಗಳಾರತಿ ಮಾಡಿದಮೇಲೆ ಅವರ ಕ್ರಿಕೆಟ್ ಆಡೋ ಹುಚ್ಚು ಕಮ್ಮಿ ಆಯ್ತು.          ನಮ್ಮ ಶಾಲೆಲಿ ಆಟದ ಅವಧಿಯಲ್ಲಿ ನಮ್ಮ ಸರ್ ಏನಾದ್ರು ಇದ್ರೆ ಮಾತ್ರ ನಾವು ಅವರು ಹೇಳಿದ್ದ ಆಟ ಆಡ್ತಾ ಇದ್ವಿ. ಒಂದು ವೇಳೆ ಸರ್ "ನಿಮಗೇನು ಬೇಕು ಆಡಕೊಳ್ರಿ" ...

ಹಳೇ ನೆನಪುಗಳು:ಹೊಸ ವರ್ಷ

ಅಪ್ಪಾ ನಂಗೆ 10 ರೂಪಾಯಿ ಬೇಕು ... ಯಾಕೆ ಅಂತಾ ಕೇಳಿದ್ರು. ಆಗಿನ್ನೂ ನಾನು ನಾಲ್ಕನೇ ತರಗತಿಲಿ ಓದ್ತಿದ್ದೆ . ನಾಳೆ ಹೊಸಾ ವರ್ಷ, Sir ಗೆ greetings card ಮಾಡಿ ಕೊಡ್ತಿದಿವಿ ಅದಕ್ಕೆ ಅಂತಾ ಅಂದೆ. ಆಯ್ತು ತೊಗೋ ಅಂತಾ ಜೇಬಿಂದ 10 ರೂಪಾಯಿ ತೆಗೆದುಕೊಟ್ರು . ಏನು ಮಾಡ್ತೀರಿ ಅಂತಾ ಕೇಳಿದ್ರು .. ದಪ್ಪಾ ಪೇಪರ್ ನಲ್ಲಿ sketch pen ಇಂದ "ಹೊಸಾ ವರ್ಷದ ಹಾರ್ದಿಕ ಶುಭಾಶಯಗಳು 1995 " ಅಂತಾ ಬರೀತೀನಿ ಅಂದೆ.ಆಯ್ತು ದುಡ್ಡು ಜೋಪಾನ ಕಳ್ಕೊಬೇಡ, ಶಾಲೆ ಇಂದ ಬರ್ತಾ paper  ತೊಗೊಂಡ್ ಬಾ ಅಂದ್ರು  ಅದರ ಹಿಂದಿನ ದಿನ ಗೆಳೆಯರೆಲ್ಲ ಸೇರಿ greeting card ಕೊಡೋನಾ ಅಂತಾ ಯೋಚಿಸಿದ್ವಿ . ಸರಿ ಅಂತಾ ನಾನು ಶಾಲೆಗೆ ಹೋದೆ. ತುಂಬಾ ಹತ್ತಿರದ ಗೆಳೆಯರಿಗೆ ಮಾತ್ರ, ಲೇ ನೋಡು ಅಪ್ಪ 10 ಕೊಟ್ರು ಅಂತಾ ತೋರ್ಸಿ,ನೀನು ಏನ್ ಬರಿತಿಯ, ಹೆಂಗೆ ಬರಿತಿಯ, ಯಾವ ಯಾವ ಬಣ್ಣದ ಪೆನ್ use ಮಾಡ್ತಿಯಾ, ಅದು ಇದು ಅಂತಾ  ಕೇಳಿ ಸಂಜೆ ವಾಪಸ್ ಮನೆಗೆ ಬರುವಾಗ paper ಮತ್ತೆ sketch pen ತೊಗೊಂಡು ಹೋದೆ. ಊಟಕ್ಕಿಂತ ಮುಂಚೆನೇ ನನಗೆ ತೋಚಿದ ರೀತಿಲಿ ಶುಭಾಶಯ ಸಂದೇಶ ಬರೆದು ಬಣ್ಣ ತುಂಬಿದೆ.   ಮಲಗಬೇಕಿದ್ರೆ, ಬೇರೆ ಗೆಳೆಯರು ಯಾವತರಾ ಬರದಿರಬಹುದು ಅನ್ನೋ ಕುತೂಹಲ !!!! ಬೆಳಿಗ್ಗೆ ಶಾಲೆಲಿ ಎಲ್ಲರೂ ತಮ್ಮ card ಅನ್ನ ತೋರ್ಸಿ ಲೇ ನೋಡು ನಾನು ಎಷ್ಟು ಚೆನ್ನಾಗಿ ಬರದಿದಿನಿ ಅಂತಾ ಹೇಳಿದ್ದೆ ಹೇಳಿದ್ದು. ಒಬ್ಬರೆ ಹೋಗಿ sir ಗೆ card ಕೊಟ...

My First Pen...

ಮೊನ್ನೆ code ಅಲ್ಲಿರೋ bug ಗೆ fix ಯೋಚಿಸುತ್ತಾ ಕೀ ಬೋರ್ಡ್ ಕುಟ್ಟುತಿರಬೇಕಾದ್ರೆ ಔಟ್ಲುಕ್ one new message ಅಂತ ತೋರಿಸ್ತು, ಸ್ವಲ್ಪ relax ಆಗುವ ಅಂತ ಔಟ್ಲುಕ್ open ಮಾಡ್ದೆ. ನನ್ನ friend ಕಳಿಸಿದ "Ink stained Finger" ಅನ್ನೋ message ಓದುತ್ತಿದಂತೆ ನನ್ನ ಮನಸ್ಸು 15 ವರುಷಗಳ ಹಿಂದೆ ಸರಿತು... ನಾವೆಲ್ಲ 3 ನೇ class ವರೆಗೂ slate ನ್ನೇ  ಬಳಸಿದ್ದು. ಆಗ ಶಾಲೆಗೆ ಏನಾದ್ರು ರಜೆ ಅಂತ ಗೊತ್ತಾದ್ರೆ "ಪಾಠಿ ಮೇಲೆ ಪಾಠಿ ನಮ್ಮ ಸಾಲಿ [ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಸೂಟಿ ಅಂದ್ರೆ ರಜೆ]" ಅಂತ ಕುಣಿದಾಡಿದ್ದು ನೆನಪಾಗಿ ನಗು ಬಂತು.... 3 ನೇ ತರಗತಿಗೆ ನಾನು ಮೊದಲ Pen ಬಳಸಿದ್ದು... ಆವಾಗಲೇ ಮೊದಲ ಪರೀಕ್ಷೆ paper ನಲ್ಲಿ ಬರೆದಿದ್ದು ... ಅಲ್ಲಿಯವರೆಗೆ ಬರಿ ಮೌಖಿಖ ಪರೀಕ್ಷೆ ಮಾತ್ರ ಇತ್ತು. ಅಮ್ಮ ನನ್ನ ಅಕ್ಷರ ನೋಡಿ, "ಏನೋ ಇದು ಕಾಗೆ ಗುಬ್ಬಚಿ ಕಾಲು ತರಹ ಬರಿತಿಯಾ" ಅಂತ ಬೈದು ತಿದ್ದತಾ ಇದ್ದರು. ಆವಾಗಲೇ ಅಪ್ಪ ತೊಗೋ ಇ ಇಂಕ್ ಪೆನ್ನನ , ಇದರಿಂದ ಬರೆದು ನೋಡು ಅಂತ ಮೊದಲ ಸಲ ನನ್ನ ಕೈಗೆ ink pen ಕೊಟ್ಟಿದ್ರು. ಏನೋ ಸ್ವಲ್ಪ ಅಕ್ಷರ ಸುದಾರಿಸಿತಾದ್ರು , ಹೇಳಿಕೊಳ್ಳು ಹಾಗೆ ಏನು ವ್ಯತ್ಯಾಸ ಆಗ್ಲಿಲ್ಲಾ. ಆದ್ರೆ ಆವಾಗಿನಿಂದ ನಾನು ink pen ಉಪಯೂಗಿಸೋಕೆ ಶುರು ಮಾಡಿದ್ದು. ಆದ್ರೆ ಅಮ್ಮನ ಬೈಗುಳ ಹೆಚ್ಚಿತೇ ಹೊರತು ಕಮ್ಮಿ ಆಗಲಿಲ್ಲ. ಕೆಲವೊಂದು ಸಲ ಅಂಗಿ ಮೇಲೆ ಮ...