Posts

Showing posts from April, 2010

My First Pen...

ಮೊನ್ನೆ code ಅಲ್ಲಿರೋ bug ಗೆ fix ಯೋಚಿಸುತ್ತಾ ಕೀ ಬೋರ್ಡ್ ಕುಟ್ಟುತಿರಬೇಕಾದ್ರೆ ಔಟ್ಲುಕ್ one new message ಅಂತ ತೋರಿಸ್ತು, ಸ್ವಲ್ಪ relax ಆಗುವ ಅಂತ ಔಟ್ಲುಕ್ open ಮಾಡ್ದೆ. ನನ್ನ friend ಕಳಿಸಿದ "Ink stained Finger" ಅನ್ನೋ message ಓದುತ್ತಿದಂತೆ ನನ್ನ ಮನಸ್ಸು 15 ವರುಷಗಳ ಹಿಂದೆ ಸರಿತು... ನಾವೆಲ್ಲ 3 ನೇ class ವರೆಗೂ slate ನ್ನೇ  ಬಳಸಿದ್ದು. ಆಗ ಶಾಲೆಗೆ ಏನಾದ್ರು ರಜೆ ಅಂತ ಗೊತ್ತಾದ್ರೆ "ಪಾಠಿ ಮೇಲೆ ಪಾಠಿ ನಮ್ಮ ಸಾಲಿ [ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಸೂಟಿ ಅಂದ್ರೆ ರಜೆ]" ಅಂತ ಕುಣಿದಾಡಿದ್ದು ನೆನಪಾಗಿ ನಗು ಬಂತು.... 3 ನೇ ತರಗತಿಗೆ ನಾನು ಮೊದಲ Pen ಬಳಸಿದ್ದು... ಆವಾಗಲೇ ಮೊದಲ ಪರೀಕ್ಷೆ paper ನಲ್ಲಿ ಬರೆದಿದ್ದು ... ಅಲ್ಲಿಯವರೆಗೆ ಬರಿ ಮೌಖಿಖ ಪರೀಕ್ಷೆ ಮಾತ್ರ ಇತ್ತು. ಅಮ್ಮ ನನ್ನ ಅಕ್ಷರ ನೋಡಿ, "ಏನೋ ಇದು ಕಾಗೆ ಗುಬ್ಬಚಿ ಕಾಲು ತರಹ ಬರಿತಿಯಾ" ಅಂತ ಬೈದು ತಿದ್ದತಾ ಇದ್ದರು. ಆವಾಗಲೇ ಅಪ್ಪ ತೊಗೋ ಇ ಇಂಕ್ ಪೆನ್ನನ , ಇದರಿಂದ ಬರೆದು ನೋಡು ಅಂತ ಮೊದಲ ಸಲ ನನ್ನ ಕೈಗೆ ink pen ಕೊಟ್ಟಿದ್ರು. ಏನೋ ಸ್ವಲ್ಪ ಅಕ್ಷರ ಸುದಾರಿಸಿತಾದ್ರು , ಹೇಳಿಕೊಳ್ಳು ಹಾಗೆ ಏನು ವ್ಯತ್ಯಾಸ ಆಗ್ಲಿಲ್ಲಾ. ಆದ್ರೆ ಆವಾಗಿನಿಂದ ನಾನು ink pen ಉಪಯೂಗಿಸೋಕೆ ಶುರು ಮಾಡಿದ್ದು. ಆದ್ರೆ ಅಮ್ಮನ ಬೈಗುಳ ಹೆಚ್ಚಿತೇ ಹೊರತು ಕಮ್ಮಿ ಆಗಲಿಲ್ಲ. ಕೆಲವೊಂದು ಸಲ ಅಂಗಿ ಮೇಲೆ ಮ

ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ .. :)

ಜೀವನ ಒಂದು ಹೋರಾಟ.ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ . ಬೆಚ್ಚಗೆ ತಾಯಿಯ ಗರ್ಭದಲ್ಲಿ ಇದ್ದ ಮಗು ಜನಿಸಿದಾಗ ಅಳುವುದರೊಂದಿಗೆ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ . ಮೊದಲ ದಿನ ಶಾಲೆಗೆ ಹೋದ ಮಗು ಏನನ್ನೋ ಕಳೆದುಕೊಂಡವರ ಹಾಗೆ ವರ್ತಿಸುತ್ತದೆ . ಕಾಲ ಕ್ರಮೇಣ ಶಾಲೆಯ ಪರಿಸರವನ್ನು ರೂಡಿ ಮಾಡಿಕೊಂಡು ಬಿಡುತ್ತದೆ . ಕಾಲೇಜ್ ಟೈಮ್ ಅಲ್ಲಿ ಆರಾಮಾಗಿ ಎದ್ದು ಮೊದಲ period ಬಂಕ್ ಮಾಡಿ , ತಿಂಡಿ ತಿಂದು ಎರಡನೇ period ಗೆ ಹೋಗುವ ಹುಡುಗ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಿದಾಗ ಬದಲಾಗಿರ್ತಾನೆ ಅಥವಾ ಜವಾಬ್ದಾರಿ ಅವರನ್ನು ಬದಲಾಯಿಸಿರತ್ತೆ . Cab ಪಿಕ್ ಅಪ್ ಟೈಮ್ ಬೆಳಿಗ್ಗೆ 7 ಘಂಟೆ ಎಂದರೆ 6 ಘಂಟೆಗೆ ಎದ್ದು ರೆಡಿ ಆಗ್ತಾನೆ . ಇನ್ನೊಂದು ರೀತಿಯಲ್ಲಿ ಹೇಳೋದಾದರೆ ಅವನು ಹೊಸ ಟೈಮ್ ಗೆ ಅಡ್ಜಸ್ಟ್ ಆಗಿಬಿಡ್ತಾನೆ . ಹುಟ್ಟಿನಿಂದ , ಅಮ್ಮ ಅಪ್ಪ ನ ಆರೈಕೆಯಲ್ಲಿ ಬೆಳೆದ ಮುದ್ದಿನ ಮಗಳು , ತಮ್ಮನ ಅಕ್ಕರೆ , ಅಣ್ಣನ ವಾತ್ಸಲ್ಯ ಎಲ್ಲವನ್ನು ಬಿಟ್ಟು ಮದುವೆಯ ನಂತರ ಇನ್ನೊಂದು ಮನೆಗೆ ಹೋಗಿ ಹೊಂದಿಕೊಳ್ಳುವದಿದೆಯಲ್ಲ ಅದು ತುಂಬ ಕಷ್ಟ .... ಇದೆ ತರಹ ನಾವು ಜೀವನದಲ್ಲಿ ಎಸ್ಟೊಂದು ಪರಿಸ್ಥಿತಿಗಳಿಗೆ ನಮಗೆ ತಿಳಿಯದೆ ಹೊಂದಿಕೊಂಡು ಬಿಟ್ಟಿರುತ್ತೇವೆ. ಇ