Tuesday, August 30, 2016

Photo1: Lotus

Location: Nandi hills .
Lense : Canon 18-55 mm.
To view in full screen mode click on photo.

Tuesday, March 20, 2012

ಹಲೋ ಮೇಡಂ ! ಚೆನ್ನಾಗಿದಿರಾ ?

ಕೊಟ್ರೇಶಿ !!!
ಅಲ್ಲ ಸರ್ ಅದು ಕಲ್ಲೇಶಿ...
Present  ಸರ್  ...ಅಂತ ನಮ್ಮ ಕಲ್ಲೇಶಿ ನಗ್ತಾ ಹೇಳಿದ :)
ಹಾ ಹಾ ಅಂತ  ನಾವೆಲ್ಲಾ ನಗತಿದ್ವಿ ....
ಒಹ್ ಸಾರೀ ಸಾರೀ  .. Silence ಅಂತ ನಮ್ಮ lecture ಕೂಗಿ ಮತ್ತೆ ತಮ್ಮ ಎಂದಿನ ರೀತಿ ಅಲ್ಲಿ attendence ತೊಗೊಲೋದನ್ನ ಮುಂದುವರೆಸಿದರು. ಅದು ಆದ್ಮೇಲೆ ಅವರ usual style ಅಲ್ಲಿ , 'lathe is mother machine which makes other machine '  ಅಂತ ಪಾಠ ಶುರು ಮಾಡಿದ್ರು.
ನಾವೆಲ್ಲಾ as usual full interest ಇಂದ ಪಾಠ ಕೇಳ್ತೈದ್ವಿ [please ನಗಬೇಡಿ ನಾನ seroious ಆಗಿ ಹೇಳ್ತಿದೀನಿ].
     ***
ಅದು ನಮ್ಮ engineering ನ ಮೊದಲ ವರ್ಷ. ಕ್ಲಾಸ್ ಶುರು ಆಗಿ ಎರಡು ತಿಂಗಳಾದ್ರೂ ಇನ್ನು ಜನ mutual exchange ಅಂತ ಬರ್ತಾನೆ ಇದ್ರೂ ಕ್ಲಾಸಗೆ.
ಅದೇ ತರ ನಮ್ಮ ಕಲ್ಲೇಶಿ ಕೂಡ ಹೊಳೆ ಆಚೆ ಇಂದ ಈಚೆಗೆ ಬಂದಿದ್ದ. ಪಾಪ !!!!!
ಪಾಪ ಯಾಕೆಂದ್ರೆ, ಹೊಳೆ ಆಚೆ ಅವರ ಊರು. ಊರಿಗೆ ಹತ್ರನೇ ಮುಂಚೆ ಇದ್ದ ಕಾಲೇಜ್. ನಮ್ಮ college ಬರಬೇಕು ಅಂದ್ರೆ ಪಾಪ ಅವನು ಸೈಕಲ್ ತುಳಕೊಂಡು ಹರಿಹರದ ವರೆಗೆ ಬಂದು ಅಲ್ಲಿಂದ bus ಅಲ್ಲಿ ದಾವಣಗೆರೆಗೆ ಬರಬೇಕಿತ್ತು.
ಹ್ಮ್ಮ್ಮ್ ..... cycle ತುಳಿಯೋ ಕಷ್ಟ ಗೊತ್ತಾದಮೇಲೆ ಅವನಿಗೆ ಹೊಸ ಹೊಸ ವಿಚಾರಗಳು/ಯೋಚನೆಗಳು ಬರತೊಡಗಿದವು. ಅದರಲ್ಲಿ ಒಂದು ಅಂದ್ರೆ cycle ನೆ modify ಮಾಡಿ ಅದಕ್ಕೆ motor ಅಳವಡಿಸುವದು. ಅದು ಒಳ್ಳೆ ಯೋಚನೆನೇ!!  ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್ ಗೆ ಬರಲೆಬೆಕಾದಂತದ್ದು.
ಅವನು ನಮ್ಮ ಕಾಲೇಜ್ಗೆ ಸೇರಿದ್ದು ಒಳ್ಳೆಯದೇ ಆಯ್ತು, ಇಲ್ಲ ಅಂದ್ರೆ ನಾನು ಒಬ್ಬ ಒಳ್ಳೆ friend ನ ಮಿಸ್ ಮಾಡ್ಕೊತಿದ್ದೆ....!!!
ಇ ನಮ್ಮ doubetshi ಗೆ [ ಅರೆ ಇದ್ಯಾರು doubteshi ಅಂತ ತಲೆ ಕೆದಸ್ಕೊಬೇಡಿ ಅದು ನಮ್ಮ ಕಲ್ಲೆಶಿಗೆ ನಾವು ಇಟ್ಟಿರೋ ಇನ್ನೊಂದು ಹೆಸರು :) ].
***
 ಅದು ನಮ್ಮ ಇಂಜಿನಿಯರಿಂಗ್ ನ ಎರಡನೇ ವರ್ಷ. ಒಂದು ಮೆಕ್ಯಾನಿಕಲ್ software course ಗೆ ಸೇರಿದ್ವಿ.ಪ್ರತಿ ದಿವಸ ಸಂಜೆ class ಇರ್ತಿತ್ತು. ಅಲ್ಲಿರೋ receptionists ಸಕತ್ತ cute ಆಗಿದ್ರು. ಮೊದಲಸಲ ನೋಡಿದಾಗ ನಮ್ಮ ಕಲ್ಲು ಅಂತ್ರು full  excite ಆಗ್ಬಿಟ್ಟಿದ್ದ. Ofcourse ನಾವು ಆಗಿದ್ವಿ ಆದ್ರೆ ತೋರಿಸಿಕೊಂಡಿರಲಿಲ್ಲ  ಅಸ್ಟೇ :) :).
ನಮ್ಮ ಕಲ್ಲು ಮತ್ತೆ ಕಿಶೋರ್ ದಿನಾಲು ಕ್ಲಾಸ್ ಮುಗಿದ ಮೇಲೆ ಒಟ್ಟಿಗೆ ಊರಿಗೆ ಹೋಗ್ತಿದ್ರು.

ನಮ್ಮ ಕಲ್ಲುಗೆ ಮರವು ಜಾಸ್ತಿ. ಅವನಿಗೆ ವ್ಯಕ್ತಿಗಳ ಹೆಸರು ನೆನಪಿಟ್ಟುಕೊಳ್ಳೋದು ತುಂಬಾ ಕಷ್ಟ :). 
ಅವನು ಕೆಲವೊಮ್ಮೆ ಎಷ್ಟು confuse ಆಗಿರ್ತಾನಂದ್ರೆ ಜನರ ಮುಖಗಳೇ ನೆನಪಿರಲ್ಲ ಅವನಿಗೆ .

ಹೀಗೆ ಒಂದು ದಿನ class ಮುಗಿಸಿಕೊಂಡು ಕಿಶೋರ್ ಮತ್ತು ಕಲ್ಲು ಊರಿಗೆ ಹೋಗ್ಬೇಕು ಅಂತ, high school field ವರೆಗೆ ನಡೆದುಕೊಂಡು ಹೋಗ್ತಿದ್ರು. ಎಂದಿನಂತೆ ನಮ್ಮ ಕಲ್ಲು ಅದು ಹೇಗೆ, ಇದು ಹೇಗೆ, ಅಂತ ಕಿಶೋರನ ತಲೆ ತಿನ್ನುತಾ ಹೆಜ್ಜೆ ಹಾಕ್ತಿದ್ರೆ, ಲೇ ಸುಮ್ನೆ ಬಾರ್ಲೆಪಾ ಅಂತ  ಕಿಶೋರ್ ಅವನ್ನ ಏಳದುಕೊಂಡು ಹೋಗ್ತಿದ್ದ. 

sudden ಆಗಿ ನಮ್ಮ ಕಲ್ಲು 'ಏನ್ ಮೇಡಂ ಚೆನ್ನಾಗಿದ್ದೀರ' ಅಂತ ಕೇಳಿದೆ. ಕಲ್ಲುನ ಪರಿಚಯ ಸಿಗದ ಆ ಹೆಂಗಸು ಫುಲ್ confuse ಆಗಿ ತಮ್ಮ ಮನೆ ಒಳಗಡೆ ಹೋಗಿಬಿಟ್ರು. ಅವರ ಪ್ರತಿಕ್ರಿಯ ಇಂದ ಗಲಿಬಿಲಿ ಆದ ಕಲ್ಲು -


ಕಲ್ಲು: ಲೇ ಕಿಶೋರ್, ಯಾಕಲೇ ಅವರು ಏನೋ reply ಮಾಡ್ದೇನೆ ಒಳಗಡೆ ಹೋದರು?
ಕಿಶೋರ್: ನನಗೇನ್ ಲೇ ಗೊತ್ತು. ನೀನ್ ಮಾತಾಡ್ಸಿದ್ದು, ನಿನಗ ಗೊತ್ತಿರಬೇಕು.
ಕಲ್ಲು: ಹ್ಮ್ಮ್ಮಮ್ಮ್ಮ್!!!!

ಕಿಶೋರ್: ಯಾರಲೇ ಅವರು ನಿನಗೆ ಪರಿಚಯದವರಾ? 
ಕಲ್ಲು: ಲೇ ಅವರು ನಮ್ಮ CAD ಕ್ಲಾಸ್ receptionist ಅಲ್ವೇನೋ ???
ಕಿಶೋರ್: ಲೇ ಮಂಗಸುವರ್ ... ತೂ ನನ್ನ ಮಗನೆ,ಯಾವ angle ಅಲ್ಲಿ  ನಿನಗೆ ಹಂಗೆ ಅನ್ನಸಿದ್ರಲೇ ??
ಕಲ್ಲು: ಲೇ front angle ...!!! ಹಾ ಹಾ ... ಅಲ್ವ ?
ಕಿಶೋರ್: ಹಾ ಹಾ ಹಾ ಲೇ ಲೋಫರ್ ...  ಅಲ್ವೋ ಅವರು. ಬ್ಯಾಡಪ್ಪ ಬ್ಯಾಡ .....ನಿನ್ನ ಸಹವಾಸ. ಹಾ ಹಾ .. ಲೇ ಮುಂದೆ ಕಷ್ಟ ಇದೆ ಲೇ ನಿನಗೆ.. :) :)
 ***
ಮಾರನೆ ದಿನ ನಾವೆಲ್ಲಾ ನಮ್ಮ ಸೋಮಾರಿ ಕಟ್ಟೆ ಮೇಲೆ ಕುತ್ಕೊಂಡಾಗ ಕಿಶೋರ್ ಹಿಂದಿನ ದಿನದ ಘಟನೆ ಹೇಳಿದಾಗ ನಾವೆಲ್ಲಾ ಹೊಟ್ಟೆ ನೋವು ಆಗೋ ಹಾಗೆ ನಕ್ಕಿದ್ವಿ ....