Monday, February 28, 2011

Fill IT Returns Online

Many of us don't know that we can fill our IT [income tax] returns online. By this we can save time and money.
Below are the steps to fill online returns.
Log on to https://incometaxindiaefiling.gov.in/portal/index.do
Register your self with your PAN number 


Enter your PAN number and click to proceed to next step for registration.


You will get one confirmation e-mail. After confirming you will be able to login.
User ID will be ur PAN no: 


Go to downloads and select Assement Year to download appropriate form.


Download the appropriate form (it will be .xls in format)
Fill the form using your form-16.
Evaluate the form and click “Generate” button in form to generate the .xml file.
Evaluate xml file.
Go to Submit return and select the assessment year.


You can sign your form digitally.
Click next.

Select the generated xml file and click Upload.


You will get the return form to your e-mail.
Take hard copy, sign it and post it to the following address within 30 Days
“Income Tax Department – CPC, Post Bag No - 1, Electronic City Post Office, Bangalore - 560100, Karnataka”

 PS: Verify all your entries in the spread sheet before uploading the form

Sunday, February 13, 2011

World Cup : ನೆನಪಿನ ಅಂಗಳದಿಂದ !!!

Photo courtesy: Internet
Edited by Me .
         ಕ್ರಿಕೆಟ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲಾ ? ಕ್ರಿಕೆಟ್ ಬಗ್ಗೆ ಏನು ಗೊತ್ತಿಲ್ಲದವರು ಸಹ ಪಂದ್ಯ ನಡಿತಿದ್ರೆ ಸ್ಕೋರ್ ಎಷ್ಟು? ಅಂತಾ ಎಷ್ಟೋ ಸಲ ಕೇಳಿರ್ತಾರೆ ಅಲ್ವಾ?
         ಇನ್ನೂ ಭಾರತ ಮತ್ತು ಪಾಕಿಸ್ತಾನ ನಡುವೆ ಎಂದರು ಪಂದ್ಯ ಇದ್ರೆ ಅದರ ಮಾತೆ ಬೇರೆ, ಕ್ರಿಕೆಟ್ ಕಂಡ್ರೆ ಆಗಲ್ಲ ಅನ್ನೋರು ಸಹ ಉತ್ಸುಕರಾಗಿರ್ತಾರೆ.
         ಚಿಕ್ಕಂದಿನಿಂದ ನನಗೆ ಕ್ರಿಕೆಟ್ ಬಗ್ಗೆ ಆಸಕ್ತಿ .ಚಿಕ್ಕಂದಿನಲ್ಲಿ ನಾನು ಹೆಚ್ಚಿನ ಸಮಯ ಕಳೆದದ್ದು ನನ್ನ ಅಜ್ಜನ ಮನೇಲಿ. 1983 ರಲ್ಲಿ ಭಾರತ ವರ್ಲ್ಡ್ ಕಪ್ ನ ಫೈನಲ್ ಪ್ರವೇಶಿಸಿದಾಗ ಅಜ್ಜ ಟಿವಿ ತೊಗೊಂಡಿದ್ದರಂತೆ. ನನ್ನ ಮಾವ ದಿನಾಲೂ ಕ್ರಿಕೆಟ್ ಆಡೋಕೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗ್ತಿದ್ರು. ಆಮೇಲೆ ಒಂದು tournament ಅಲ್ಲಿ ಬಾಲ್ ಬಡಿದು ಕಾಲಿಗೆ ಗಾಯ ಮಾಡಿಕೊಂಡಾಗ,ಅಜ್ಜಿ ಸರಿಯಾಗಿ ಮಂಗಳಾರತಿ ಮಾಡಿದಮೇಲೆ ಅವರ ಕ್ರಿಕೆಟ್ ಆಡೋ ಹುಚ್ಚು ಕಮ್ಮಿ ಆಯ್ತು.
         ನಮ್ಮ ಶಾಲೆಲಿ ಆಟದ ಅವಧಿಯಲ್ಲಿ ನಮ್ಮ ಸರ್ ಏನಾದ್ರು ಇದ್ರೆ ಮಾತ್ರ ನಾವು ಅವರು ಹೇಳಿದ್ದ ಆಟ ಆಡ್ತಾ ಇದ್ವಿ. ಒಂದು ವೇಳೆ ಸರ್ "ನಿಮಗೇನು ಬೇಕು ಆಡಕೊಳ್ರಿ" ಅಂದ್ರೆ ನಮಗೆ ಗೊತ್ತಿರೋದು ಒಂದೇ ಆಟ ಏನೋ ಅನ್ನೋ ಹಾಗೆ ನಮ್ಮ default choice ಕ್ರಿಕೆಟ್ ಆಗಿರುತಿತ್ತು.ನಮ್ಮ ಹತ್ರ ಸರಿಯಾದ bat ಇಲ್ಲದಿದ್ರು ಅಲ್ಲೇ ಸಿಗೋ ಒಂದು ಕಟ್ಟಿಗೆನೇ ನಮ್ಮ bat !!!  ಇನ್ನೂ ಕೆಲವೊಮ್ಮೆ ಯಾವುದೋ ಕಾರಣಕ್ಕೆ ಶಾಲೆಗೆ ಅರ್ಧ ರಜಾ ಸಿಕ್ರಂತೂ ಮುಗಿತು ನಾವು ಮಾತ್ರ ಇನ್ನರ್ಧ ದಿನ ಕ್ರಿಕೆಟ್ ಆಡಿನೇ ಮನೆಗೆ ಹೋಗ್ತಿದ್ವಿ..

        ಬರೀ ಶಾಲೆಲಿ ಅಷ್ಟೇ ಅಲ್ಲ ಮನೆ ಹತ್ರಾ ನಾನು ಆಡ್ತಿದ್ದಿದ್ದು ಅದನ್ನೇ. ನಮ್ಮ ಕೈಗೆ ಸಿಕ್ಕು ಕ್ರಿಕೆಟ್ ನ ನಿಯಮಗಳೇ ಬದಲಾಗಿದ್ವು. ಜನ ಜಾಸ್ತಿ ಇದ್ರೆ ಮಾತ್ರ full pledged ಕ್ರಿಕೆಟ್ ಆಡ್ತಿದ್ದದ್ದು, ಇಲ್ಲ ಅಂದ್ರೆ ಬರೀ off side ಮಾತ್ರ ರನ್, leg side ಮೂರು ಸಲ ಹೊಡದ್ರೆ ಔಟ್ !!! ಹೀಗೆ ಅನೇಕ ನಿಯಮಗಳು.. ರವಿವಾರ ಅಂತು ಮುಗಿತು, ಅಮ್ಮನಿಗೆ ಬೈದು ಬೈದು ಸುಸ್ತಾದರೆ ನನಗೆ ಆಟ ಆಡಿ ಸುಸ್ತು ..!!!
       ನನಗೆ ನೆನಪಿರುವ ಮೊದಲ ಕ್ರಿಕೆಟ್ ವರ್ಲ್ಡ್ ಕಪ್ ಅಂದ್ರೆ ೧೯೯೬ರದು. ಭಾರತ,ಪಾಕಿಸ್ತಾನ ಮತ್ತು ಶ್ರೀಲಂಕ ಜಂಟಿ ಆಗಿ ಆಯೋಜಿಸಿದ ಪಂದ್ಯಾವಳಿ. ಭಾರತ ಸೆಮಿ ಫೈನಲ್ ನಲ್ಲಿ ಶ್ರಿಲಂಕ ವಿರುಧ್ದ ಆಡಿತ್ತು. ಮನೇಲಿ ಆಗ ಬರೀ ನ್ಯಾಷನಲ್ ಚಾನೆಲ್ ಒಂದೇ ಬರ್ತಿತ್ತು. ಆ ಪಂದ್ಯ Day and night ಆಗಿದ್ದರಿಂದ ನೇರ ಪ್ರಸಾರದ ವೇಳೆ ನ್ಯಾಷನಲ್ ಚಾನೆಲ್ ಅಲ್ಲಿ ಪ್ರಸಾರ ಆಗುವ ವಾರ್ತೆ, ಎಲ್ಲರನ್ನು ಅರ್ಧಗಂಟೆ ತುಂಬಾ ಉತ್ಸುಕರನ್ನಾಗಿಸಿತ್ತು. ವಾರ್ತೆ ಮುಗಿದು ಪಂದ್ಯದ ನೇರ ಪ್ರಸಾರ ಆರಂಭವಾದಾಗ, ಭಾರತ ಸೋಲಿನ ದಾರಿಯಲ್ಲಿ ತಿರುಗಿ ಬಾರದಷ್ಟು ದೂರ ಹೋಗಿತ್ತು. ತುಂಬಾ ಬೇಜಾರಯ್ತು ಆ ದಿನ.
        ಅದಾದ ಮೇಲೆ ಬಂದದ್ದು ೧೯೯೯ ವರ್ಲ್ಡ್ ಕಪ್. ಭಾರತದ ಪಾಲಿಗೆ ಅತಿ ಕೆಟ್ಟ ವರ್ಲ್ಡ್ ಕಪ್ ಅಂತಾ ಅನ್ನಬಹುದು.೨೦೦೩ರ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದರು ಕಪ್ ಗೆಲ್ಲುವಲ್ಲಿ ವಿಫಲವಾಯಿತು . ೨೦೦೭ರ  ಸ್ಥಿತಿ ಸಹ ೧೯೯೯ರ ಹಾಗೆನೇ, nock out round ಗೂ ಪ್ರವೇಶಿಸಲಿಲ್ಲ.ಆದರೆ ಅದೇ ವರ್ಷ [೨೦೦೭] ನಡೆದ ಪ್ರಥಮ T20 ವರ್ಲ್ಡ್ ಕಪ್ ಅನ್ನು ಗೆದ್ದ ಸಾಧನೆ ಮಾಡಿತು.
          ಇದೆ ಫೆಬ್ರುವರಿ ೧೯ರಿಂದ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿ ಶುರು ಆಗ್ತಾ ಇದೆ. ಮತ್ತೊಮ್ಮೆ ವರ್ಲ್ಡ್ ಕಪ್ ಗೆಲ್ಲುವ ಅವಕಾಶ ಭಾರತಕ್ಕೆ. ಅನುಭವಿ ಹಿರಿಯ ಆಟಗಾರರು ಮತ್ತು ಉತ್ಸಾಹಿ ಯುವ ಆಟಗಾರರಿರುವ ನಮ್ಮ ತಂಡ, ಸ್ವದೇಶದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕಪ್ ಗೆಲ್ಲುವ favorites ...
        ಬಹುತೇಕ ಕ್ರಿಕೆಟ್ ನ ಎಲ್ಲಾ ಧಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ ಕ್ರಿಕೆಟ್ ಮಾಂತ್ರಿಕ "ಸಚಿನ್ ರಮೇಶ್ ತೆಂಡೂಲ್ಕರ್" ಗೆ ಇದು ಕೊನೆಯ ವರ್ಲ್ಡ್ ಕಪ್. ಇ ವರ್ಲ್ಡ್ ಕಪ್ ನ ಫೈನಲ್ ಪಂದ್ಯ ಇರುವದು ಮುಂಬೈನಲ್ಲಿ .ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿ ಕಪ್ ಗೆದ್ದರೆ ಸಚಿನ್ ಗೆ ಇದಕ್ಕಿಂತ ಒಳ್ಳೆ ಉಡುಗೊರೆ ಬೇರೆ ಏನಿದೇ ಅಲ್ವಾ ?
ಭಾರತ ತಂಡಕ್ಕೆ ಶುಭವಾಗಲಿ....

Wednesday, February 9, 2011

Valley Of Flowers Trip - Pre Planning.

        We the group of 5-6 people are planing to visit valley of flower in August 2011. We have a rough outline of trip. Just we have travel plan of now. Not yet planned about the lodging and guide.
If anybody had been to Valley of flowers please guide us.
And is it good to go through any trip organizer ?

Rough plan of the trip is as follows -
Day 1:
Leave to Delhi from Bangalore on 13th  August by morning flight
Visit some places in Delhi
Leave to Haridwar by night train.
Day 2:
Visit Haridwar and leave to Rishikesh by bus.
Halt at rishikesh.
Day 3
Leave to Joshimath by bus
Halt at Joshimath .
Day 4
Joshimath to Govind ghat , then trek to Gangria
Halt at Gangria
Day 5
Gangria to Valley of Flowers trek
Back to Gangria and halt
Day 6
Gangria to Hemkund and back to Gangria
halt at Gangria
Day7
Gangria to Govind ghat then to Joshimath
halt at Joshimath
Day 8
Joshimath to Rishikesh
halt at Rishikesh
Day 9
Rishikesh to Delhi

Please suggest if any other places we can cover.
Your suggestions will help us to plan and execute the trip smoothly.
Hope will get some good response.

Saturday, February 5, 2011

ನನ್ನವಳು !!!

photo courtesy: Internet 

          2008 ಸೆಪ್ಟೆಂಬರ್, ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷ ಆಗಿತ್ತು .  ನಾನು ಅವಳನ್ನ ಮೊದಲಸಲ ನೋಡಿದ್ದು internet ನಲ್ಲಿ ... ನನಗೆ ಯಾಕೋ ಏನೋ ತುಂಬಾ ಹಿಡ್ಸಿದ್ಲು. ಅವಳ ಆ ಮುದ್ದು ಮುಖ, ತಿಕ್ಷ್ಣ ಕಣ್ಣು, ಆ ನಾಜುಕತೆ ಹೀಗೆ ಏನೇನೊ...ಆಮೇಲೆ ಸುಮಾರು ಒಂದು ತಿಂಗಳವರೆಗೆ ಯೋಚಿಸಿದೆ . ಇದೆಲ್ಲ ಈಗ ಬೇಕಾ? ಇನ್ನೂ ಈಗ ಒಂದು ವರ್ಷ ಆಯ್ತು ಕೆಲ್ಸಕ್ಕೆ ಸೇರಿ. ಒಂದು ಸರಿಯಾಗಿ ನೆಲೇನು ಕಂಡಕೊಂಡಿಲ್ಲಾ, ಒಂದು ವರ್ಷದಲ್ಲಿ ಗಳಸಿದ್ದಾದ್ರು ಎಷ್ಟು ?.
        ನನ್ನ ಫ್ರೆಂಡ್ಸ್ ಮತ್ತು ರೂಂ ಮೇಟ್ಸ್ ಗಳಿಗೆ ವಿಷಯ ಹೇಳಿದಾಗ ಅವರು ಸಹಜವಾಗಿಯೇ ಖುಷಿ ಪಟ್ಟಿದ್ರು 'You carry on buddy'  ಅಂತಾ ಪ್ರೋತ್ಸಾಹ ಬೇರೆ ಸಿಕ್ತು. ಏನೋ ಮಾಡಿ ಅವಳನ್ನ ಪಡದದ್ದು ಆಯ್ತು...
        ದೀಪಾವಳಿಗೆ ಅವಳನ್ನ ಮನೆಗೆ  ಕರೆದುಕೊಂಡು ಹೋದೆ. ಅನ್ನುಕೊಂಡಹಾಗೆ ಮನೆಯಲ್ಲಿ ಅಮ್ಮ ಬೇಜಾರದ್ರೆ, ಅಪ್ಪ, ಈಗ ಇದೆಲ್ಲ ಬೇಕಿತ್ತಾ ನಿನಗೆ ಅಂತಾ ಬೈದ್ರು?? .. ಆದ್ರೆ ನನ್ನ ತಂಗಿ ಮತ್ತು ತಮ್ಮ ಮಾತ್ರ ಫುಲ್ ಖುಶ್...!!!!. ಅದು ಇದು ಅಂತಾ ಏನೇನೊ ಹೇಳಿ ಅಪ್ಪ ಅಮ್ಮನ್ನ ಸಮಾಧಾನ ಪಡಿಸಿದೆ. ಆಮೇಲೆ ಎಲ್ಲಾ normal ..
        ನಾನು ಯಾವದೇ ಟ್ರಿಪ್ ಗೆ ಹೋಗಲಿ ಅಥವಾ ಯಾವುದೇ ಊರಿಗೆ ಹೋದರು ನನ್ನ ಜೊತೆಗಾತಿ ಆದಳು ಅವಳು.
ನಾವು ಮೊದಲ ಟ್ರಿಪ್ ಅಂತಾ ಹೋಗಿದ್ದು ಮಡಿಕೇರಿಗೆ.ಆ ಆಹ್ಲಾದಕರ ವಾತಾವರಣ, ಪ್ರಕೃತಿಯ ಆ ಸೌಂದರ್ಯ,ಎಲ್ಲವನ್ನು  ನಾನು ಅವಳ ಕಣ್ಣುಗಳಿಂದನೇ ನೋಡೋಕೆ ಪ್ರಯತ್ನಿಸಿದೆ.ಅವಳ ಕಣ್ಣುಗಳು ಎಷ್ಟು ತೀಕ್ಷ್ಣ ಅಂದ್ರೆ ನನಗೆ ಕಾಣದ ಅತಿ ಸಣ್ಣ ವಸ್ತುಗಳನ್ನೂ ಅವಳ ನೋಡಬಲ್ಲಳು.
        ಅದು ಯಾರ ಕಣ್ಣು ಬಿತ್ತೋ ಏನೋ, ಅವತ್ತು ತಲಕಾವೇರಿಯ ಬೆಟ್ಟದಿಂದ ಇಳಿತಿರಬೇಕಾದ್ರೆ ಅವಳು ಜಾರಿ ಬಿದ್ದು ಬಿಟ್ಟಳು ..
ಬೆಂಗಳೊರಿಗೆ ಬಂದ ಮೇಲೆ ಅವಳನ್ನ ಒಂದು ವಾರ ಆಸ್ಪತ್ರೆಗೆ ಸೇರಿಸಿದ್ದು ಆಯ್ತು  :(
       ಅದಾದಮೇಲೆ ಸುಮಾರು  ಊರುಗಳನ್ನ ಅವಳೊಟ್ಟಿಗೆ ಸುತ್ತಿದ್ದು ಆಯ್ತು. Cricket match, office functions , ಏರ್ ಪೋರ್ಟ್, ಅಂತಾ ಬೆಂಗಳೂರನ್ನು ಸುತ್ತಿದ್ವಿ ....!!!
       ಈಗ ಅಮ್ಮನು ಬೇಜಾರಾಗಿಲ್ಲ .. ನಾನು ಊರಿಗೆ ಬರ್ತಿದೀನಿ ಅಂದ್ರೆ, ಅವಳನ್ನು ಕರ್ಕೊಂಡು ಬಾ ಮರಿಬೇಡ ಅಂತಾರೆ .. :). ಯಾವುದೇ ಹಬ್ಬಕ್ಕೆ/ಕಾರ್ಯಕ್ರಮಗಳಿಗೆ ಅಂತಾ ಊರಿಗೆ ಹೋದರು ಅವಳು ನನ್ನ ಜೊತೆ ಹಾಜರ್!!!. ಅವಳನ್ನ ಕಂಡ್ರೆ ಈಗ ಮನೆಯಲ್ಲಿ ಎಲ್ಲರಿಗೂ ಇಷ್ಟ.
ಅಯ್ಯೋ, ಇವನು ಯಾರ ಬಗ್ಗೆ ಹೇಳ್ತಿದಾನೆ ಅಂತಾ ತಲೆ ಕೇಡಿಸಿಕೊಳ್ಳಬೇಡಿ. ನಾನು ಇಷ್ಟೊತ್ತು ಹೇಳಿದ್ದು ನನ್ನ ಪ್ರೀತಿಯ ಕ್ಯಾಮೆರಾ ಬಗ್ಗೆ.  
ನನ್ನವಳ ಕಣ್ಣುಗಳಿಂದ ಸೆರೆ ಹಿಡಿದ ಕೆಲವು ಫೋಟೋಗಳು ಇಲ್ಲಿವೆ.ನಿಮ್ಮ ಅನಿಸಿಕೆಗಳನ್ನು ತಿಳಿಸಲು ಮರೆಯಬೇಡಿ..
Photo Gallery Link 

Wednesday, February 2, 2011

ನನ್ನ ತಮ್ಮ ಶಂಕರ


                                                                 ಲೇಖಕರು ಅನಂತನಾಗ .  [Nanna tamma Shankar]
       ಶಂಕರನಾಗ ಕನ್ನಡನಾಡು ಕಂಡ ಒಬ್ಬ ಅಪ್ರತೀಮ ಪ್ರತೀಭೆ.
       ಶಂಕರನಾಗ್ ಎಂದಾಗ ತಟ್ಟ ಅಂತಾ ನೆನಪಾಗೋದು 'ಮಾಲ್ಗುಡಿ ಡೇಸ್'.ಕನ್ನಡದ ಅನೇಕ ಕಲಾವಿದರನ್ನು ಚಿಕ್ಕ ಪರದೆಯಮೇಲೆ ತಂದ ಖ್ಯಾತಿ ಶಂಕರನಾಗ್ ಅವರದು. ಬರೀ ಚಿತ್ರರಂಗಕ್ಕಷ್ಟೇ ಸೀಮಿತವಾಗಿರದೆ, ಸಮಾಜಕ್ಕೆ ಉಪಯೋಗವಾಗುಹಂತಹ ಅನೇಕ ಚಟುವಟಿಕೆಗಳಲ್ಲಿ.ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿ. ನಮ್ಮಲ್ಲಿ ಎಷ್ಟೋ ಜನಕ್ಕೆ ಇದರಬಗ್ಗೆ ಗೊತ್ತಿಲ್ಲ . ನನಗೂ ಇ ಪುಸ್ತಕ ಓದುವವರೆಗೆ ಗೊತ್ತಿದ್ದಿಲ್ಲ.
           ೧೯೮೦ರ ಕಾಲದಲ್ಲೇನೆ metro ರೈಲಿನ ಬಗ್ಗೆ ಅವರ ಕನಸು, ಕಡಿಮೆ ಖರ್ಚಿನಲ್ಲಿ ಮನೆಗಳ ನಿರ್ಮಾಣ .. ಹೀಗೆ ಹತ್ತು ಹಲವು ಯೋಜನೆಗಳ ಬಗ್ಗೆ ಆಸಕ್ತಿ ಹೊಂದಿದ್ದ ವ್ಯಕ್ತಿ. ಈಗ ಅವರು ಇದ್ದಿದ್ರೆ ನಮ್ಮ ಚಿತ್ರರಂಗದ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ...!!!!
          ಶಂಕರನಾಗ ಬದುಕಿದ್ದು ಅಲ್ಪಾವದಿಗೆ ಆಗಿದ್ದರು ಅವರ ಸಾಧನೆ, ಅವರ ಹೆಸರು ಅಜರಾಮರ. ಇಷ್ಟು ಸಾಧನೆ ಮಾಡಲು ಅವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಇಗಲೂ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ .
         ಅವರ ಜೀವನ ಶೈಲಿ, ಅವರು ಬದುಕಿದ ರೀತಿ, ಅವರ ಯೋಚನಾಶಕ್ತಿಯ ಬಗ್ಗೆ ಪುಸ್ತಕದ ರೂಪದಲ್ಲಿ ಹೇಳಿರುವ ಅನಂತನಾಗ ಅವರಿಗೆ ಧನ್ಯವಾದಗಳು ..
ಶಂಕರನಾಗ ಅವರ ಬಗ್ಗೆ ಹೇಚ್ಚು ತಿಳಿಯಲು ಇ ಪುಸ್ತಕ ಓದಿ .
some internet links:
http://www.shankarnag.in/
http://en.wikipedia.org/wiki/Shankar_Nag

photo courtesy: From internet.

Tuesday, February 1, 2011

ಅಂತ್ಯಕ್ರೀಯೆ:ರೂಡಿಗಳು

            
        ಹುಟ್ಟು ಸಾವು  ಒಂದೇ ನಾಣ್ಯದ ಎರಡು ಮುಖಗಳ ಹಾಗೆ . ಹುಟ್ಟಿದ ಪ್ರತೀ ಜೀವಿಯೂ ಸಾಯಲೇಬೇಕು. ಅದು ಪಕೃತಿ ನಿಯಮ.
ಒಂದು ಹುಟ್ಟು ಮನೆಯಲ್ಲಿ ಸಂಭ್ರಮ, ಸಂತೋಷ , ಒಂದು ಹೊಸ ಬದುಕಿನ ಆಸೆ ಮೂಡಿಸಿರುತ್ತದೆ. ಇದರ ತದ್ವೀರುದ್ದದ ಅಥವಾ ಇದಕ್ಕಿಂತ ತುಸು ಹೆಚ್ಚಿನದೇ ಆದ ಒಂದು ಶೋಕ,ದುಖ: ಒಂದು ಜೀವ ತೀರಿದಾಗ!!!
            ಒಬ್ಬ ವ್ಯಕ್ತಿ ಎಷ್ಟೇ ಸಿರಿವಂತನಾದರು ಕಡೆಗೆ ಸೇರುವದು ಮಣ್ಣನ್ನೇ ಅನ್ನೋ ನುಡಿಯನ್ನು ಎಲ್ಲರೂ ಕೇಳಿರುತ್ತಿವಿ.ಪ್ರತಿಯೊಂದು ಧರ್ಮದಲ್ಲಿ ಅದರೆದೇ ಆದ ಕೆಲವು ನಿಯಮಗಳು ಅಂತ್ಯಕ್ರೀಯಗೆ ಇದ್ದೆ ಇರುತ್ತವೆ. ಕೆಲವೊಂದನ್ನು  ನಮ್ಮ ಹಿರಿಯರು ಮಾಡಿಕೊಂಡು ಬಂದರೆಂದು ಅನುಸರಿಸಿದರೆ, ಇನ್ನೂ ಕೆಲವೊಂದು ಪ್ರಸ್ತುತ ಸಮಾಜಕ್ಕೆ ವೈಜ್ಞಾನಿಕವಾಗಿ ಅವಶ್ಯಕವಾಗಿರುವಂತಹವು.
          ನಮ್ಮ ಹಿಂದೂ ಧರ್ಮದಲ್ಲಿ ಎರಡು ವಿಧದ ಅಂತ್ಯಸಂಸ್ಕಾರಗಳು ರೂಡಿಯಲ್ಲಿವೆ. ಒಂದು "ಅಗ್ನಿ ಸ್ಪರ್ಶ" ಇನ್ನೊಂದು "ಮಣ್ಣು ಮಾಡುವದು". ಅಂತ್ಯಕ್ರಿಯೆಯ ನಂತರ ಸ್ನಾನ,ವಿವಿಧ ಪೂಜೆಗಳು, ಹೀಗೆ ನಾನಾ ತರಹದ ಆಚರಣೆಗಳು ಇರುತ್ತವೆ.
         ಇ ಮೇಲಿನ ಆಚರಣೆಗಳ ಬಗ್ಗೆ ನನಗನಸಿದ ಕೆಲವು ಸಂಗತಿಗಳನ್ನು ಇಲ್ಲಿ ಹೇಳಲು ಇಷ್ಟಪಡುತ್ತೇನೆ -
         ಸ್ನಾನ:  ಸ್ಮಶಾನದಿಂದ ಬಂದ ಜನ ಸ್ನಾನ ಮಾಡದೆ ಮನೆಯೊಳಗೆ ಹೋಗಲ್ಲ.ಸ್ಮಶಾನದ ಪರಿಸರದಲ್ಲಿ ಇದ್ದಿರಬಹುದಾದ ಕ್ರಿಮೀ ಕೀಟಗಳು, ಸ್ಮೊಕ್ಷ್ಮಾನು ಜಂತುಗಳು  ಮನೆಯೊಳಗೆ ಸೇರಬಹುದೆಂದು ಸ್ನಾನ ಮಾಡಿಯೇ ಮನೆಗೆ ಪ್ರವೇಶ. ಇನ್ನೂ ಒಂದು ಸಂಗತಿ ಎಂದರೆ ಹತ್ತಿರದ ಸಂಬಂಧಿಕರಿಗೆ,ಒಂದು ಬಿಂದಿಗೆ ಬಿಸಿ ನೀರು ಮತ್ತೊಂದು ಬಿಂದಿಗೆ ತಣ್ಣೀರು ಸುರಿಯುತ್ತಾರೆ. ಅತ್ತು ಅತ್ತು ದೇಹದಲ್ಲಿ ರಕ್ತದೊತ್ತಡ ಹೆಚ್ಚು ಕಮ್ಮಿಯಾಗಿದ್ದಾರೆ, ಇ ರೀತಿ ಬಿಸಿ ನೀರು ಮತ್ತು ತಣ್ಣೀರನ್ನು ಹಾಕುವದರಿಂದ ಸಮತೋಲನಕ್ಕೆ ಬರುತ್ತದೆ.
        ಇನ್ನೂ ಸಂಸ್ಕಾರದ ಮಾರನೆಯದಿನ ಮನೆಯ ಕೆಲವು ಜನ ಬೆಳಿಗ್ಗೆ ಸ್ಮಶಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಸಂಸ್ಕಾರ ಮಾಡಿದ ಸ್ಥಳ ಸರಿಯಾಗಿದೇನೂ ಇಲ್ಲವೋ ಅಂತಾ ಪರಿಕ್ಷೀಸುವದ್ದಕ್ಕೊಸ್ಕರ ಇ ರೀತಿ ಮಾಡಿರಬಹುದು.
       ಹೆಣ್ಣುಮಗಳ ಗಂಡನೆನಾದ್ರು ತೀರಿ ಹೋಗಿದ್ರೆ, ಆಕೆಯ ತವರು ಮನೆಯವರು ಸ್ವಲ್ಪದಿನಕ್ಕೆ ಅಂತ ಅವಳನ್ನು ತವರು ಮನೆಗೆ ಕರೆದೊಕೊಂಡು ಹೋಗುತ್ತಾರೆ. ಇನ್ನೂ ತನಗೆ ಯಾರು ಇಲ್ಲ ಅನ್ನುವ ಒಂದು ಮಾನಸಿಕ ಭಾವನೆ ಬರಬಾರದು ಅಂತಾನೇ ಅನ್ನಿಸುತ್ತೇ ಇ ರೀತಿ ಮಾಡೋದಕ್ಕೆ.
      ಇ ತರಹದ ಇನ್ನೂ ಎಷ್ಟೂ ಅಂಶಗಳು, ಆಚರಣೆಗಳು ಇವೆ. ಆದರೆ ಅವುಗಳನ್ನು ಇಲ್ಲಿ ಬರಿಯೋದಕ್ಕೆ ಆಗ್ತಿಲ್ಲ....