Ashes ಸರಣಿಯ ಇತಿಹಾಸ

Cricket ಅಂದ್ರೆ ಯಾರಿಗೆ ಗೊತ್ತಿಲ್ಲ ?? ಎಸ್ಟೋ ಜನ ಕ್ರಿಕೆಟ್ ನೋಡದೆ ಇರೋರು  ಕೂಡ at least  score ಆದ್ರು ನೋಡ್ತಿರ್ತಾರೆ.
ಇ ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ ಅಲ್ಲಿ . ಬೆಳೆದದ್ದು ನಮ್ಮ ಭಾರತದಲ್ಲಿ ಅಂತಾ ಹೇಳಬಹುದು. ಬಾಲಿವುಡ್ ಅಲ್ಲಿ ಬಂದ 'ಲಗಾನ್' ಸಿನಿಮಾ ಅಂತು ನಮ್ಮ ದೇಶದಲ್ಲಿ ಕ್ರಿಕೆಟ್ಗೆ ಒಂದು ಹೂಸ ಕಳೆ ತಂದುಕೊಟ್ಟಿತು .ಇತ್ತೀಚಿಗೆ ಬಂದ IPL, ಕ್ರಿಕೆಟನ್ನಲ್ಲು ತುಂಬಾ ದುಡ್ಡು ಮಾಡಬಹುದು ಅಂತಾ ತೋರಿಸಿಕೊಟ್ಟಿತು ..
ಕ್ರಿಕೆಟ ಅಲ್ಲಿ ವಿವಿದ ಬಗೆಗಳಿವೆ. 'Test' ಮತ್ತು 'one day' ತುಂಬಾ ಹಳೆಯ ಬಗೆಗಳು. ಇ 'T20' ತುಂಬಾ ಇತ್ತೀಚಿಗೆ ಶುರುವಾದದ್ದು.
ಇ ಟೆಸ್ಟ್ ಕ್ರಿಕೆಟ್ನ ನಿಜವಾದ ಕ್ರಿಕೆಟ್  ಅಂತಾನೇ ಹೇಳಬೇಕು. ಇದು 5 ದಿನದ ಆಟ. ಇಲ್ಲಿ ಪ್ರತಿಯೊಬ್ಬ ಆಟಗಾರನ ನಿಜವಾದ ಸಾಮರ್ಥ್ಯ ಗೊತ್ತಾಗಿಬಿಡುತ್ತದೆ.
ಕ್ರಿಕೆಟ್ನಲ್ಲಿ ಇಂಗ್ಲೇಂಡ ಮತ್ತೆ ಆಸ್ಟ್ರೇಲಿಯಾ ಮದ್ಯ ಅದೆಂತದೋ ಪೈಪೋಟಿ... ಇದೆ ತಂಡಗಳ ಮದ್ಯ ಪ್ರತಿ 2 ವರ್ಷಕ್ಕೊಮ್ಮೆ ಒಂದು  test series ನಡೆಯತ್ತೆ, ಅದೇ 'Ashes' series. ಇ series ಗೆ ಒಂದು ತುಂಬಾ intresting ಆಗಿರೋ ಇತಿಹಾಸನೆ ಇದೆ.
1882 ರಲ್ಲಿ ಆಸ್ಟ್ರೇಲಿಯಾ ಇಂಗ್ಲೇಂಡನ, ಇಂಗ್ಲೇಂಡಿನಲ್ಲೆ  ಮೊದಲಸಲ ಸೂಲಿಸ್ತು. ಆಗ media "English cricket had died, and the body will be cremated and the ashes taken to Australia"  [ಇಂಗ್ಲೇಂಡ ಅಲ್ಲಿ ಕ್ರಿಕೆಟ್ ಸತ್ತುಹೋಯ್ತು, ಅದರ ಅಂತ್ಯ ಕ್ರಿಯೆ ಮಾಡಿ ಬೂದಿನ ಆಸ್ಟ್ರೇಲಿಯಾಗೆ ಒಯ್ಯಲಾಯಿತು] ಅಂತಾ ಬರೆತು.
ಮಾರನೆ ವರ್ಷ [1883 ] ಇಂಗ್ಲೆಂಡ್ ಟೀಮ್ ಆಸ್ಟ್ರೇಲಿಯಾ tour ಗೆ ಹೊರಟಾಗ ಇಂಗ್ಲೇಂಡ media ಇ ಪ್ರವಾಸವನ್ನು  "The quest to regain The Ashes" ಅಂತಾ ಬಣ್ಣಿಸಿತು. ಇ ಪ್ರವಾಸದ ಸಮಯದಲ್ಲಿ ಇಂಗ್ಲೇಂಡನ ನಾಯಕನಿಗೆ, ಒಂದು ಚಿಕ್ಕ ಕಟ್ಟಿಗೆ ಇಂದ ಮಾಡಿದ ಹೂಜಿಯಂತಹ ಆಕ್ರತಿಯಲ್ಲಿ ಬೂದಿ ತುಂಬಿ ಕಾಣಿಕೆ ಅಂತಾ ಕೆಲವು ಜನ ಕೊಟ್ರು. ಅದರಲ್ಲಿ ಇರೋ ಬೂದಿ ಒಂದು 'Bails' ನ ಬೂದಿ ಆಗಿತ್ತು.  ಅದು ಅಕ್ಷರಶ ಇಂಗ್ಲೇಂಡ ಕ್ರಿಕೆಟ್ನ ಅಂತ್ಯ ಕ್ರಿಯೆ ಮಾಡಿದರ ಸಂಕೇತವಾಗಿತ್ತು.
1998ರ ಇಚೆಗೆ, ಅದೇ ತರಹದ 'Trophy' ಅನ್ನು ಗೆದ್ದ ತಂಡಕ್ಕೆ official trophy ಕೊಡ್ತಿದಾರೆ.
ಇ Ashes ಸರಣಿಯಲ್ಲಿ 5 match ಇರತ್ವೆ. ಯಾವ ತಂಡ ಹೆಚ್ಚು ಪಂದ್ಯಗಳನ್ನ ಗೆಲ್ಲತೋ ಅದು ಸರಣಿ ಗೆದ್ದಹಾಗೆ .ಒಂದು ವೇಳೆ ಸರಣಿ ಸಮಬಲದಲ್ಲಿ ಮುಕ್ತಾಯವಾದ್ರೆ, ಹಿಂದಿನ ಸಲ ಸರಣಿ ಗೆದ್ದ ಟೀಮ್ Trophy ನ ಒಳಿಸಿಕೊಳ್ಳತ್ತೆ.
ಸದ್ಯ ನಡೆದಿರುವ ಸರಣಿಯಲ್ಲಿ ಇಂಗ್ಲೇಂಡ ತಂಡ 1-0 ಇಂದಾ ಮುಂದೆ ಇದೆ .
ಇರತಹದ ಇತಿಹಾಸ ಇರುವ ಕ್ರಿಕೆಟ್ ಸರಣಿಗಳು ಕ್ರಿಕೆಟ್ನಲ್ಲಿ ತುಂಬಾ ಕಡಿಮೆ. ಯಾಕೋ ಇ ಸರಣಿ ಬಗ್ಗೆ ಬರಿ ಬೇಕು ಅಂತಾ ಅನ್ನಸ್ತು ಬರದೆ.
comments are always welcome ;)

-ಮಂಜು !!!

Comments

Popular posts from this blog

ಹಲೋ ಮೇಡಂ ! ಚೆನ್ನಾಗಿದಿರಾ ?

Whom to contact....???

ಹಲೋ !!! TeaYa ನಾ???