ಅಂತ್ಯಕ್ರೀಯೆ:ರೂಡಿಗಳು

            
        ಹುಟ್ಟು ಸಾವು  ಒಂದೇ ನಾಣ್ಯದ ಎರಡು ಮುಖಗಳ ಹಾಗೆ . ಹುಟ್ಟಿದ ಪ್ರತೀ ಜೀವಿಯೂ ಸಾಯಲೇಬೇಕು. ಅದು ಪಕೃತಿ ನಿಯಮ.
ಒಂದು ಹುಟ್ಟು ಮನೆಯಲ್ಲಿ ಸಂಭ್ರಮ, ಸಂತೋಷ , ಒಂದು ಹೊಸ ಬದುಕಿನ ಆಸೆ ಮೂಡಿಸಿರುತ್ತದೆ. ಇದರ ತದ್ವೀರುದ್ದದ ಅಥವಾ ಇದಕ್ಕಿಂತ ತುಸು ಹೆಚ್ಚಿನದೇ ಆದ ಒಂದು ಶೋಕ,ದುಖ: ಒಂದು ಜೀವ ತೀರಿದಾಗ!!!
            ಒಬ್ಬ ವ್ಯಕ್ತಿ ಎಷ್ಟೇ ಸಿರಿವಂತನಾದರು ಕಡೆಗೆ ಸೇರುವದು ಮಣ್ಣನ್ನೇ ಅನ್ನೋ ನುಡಿಯನ್ನು ಎಲ್ಲರೂ ಕೇಳಿರುತ್ತಿವಿ.ಪ್ರತಿಯೊಂದು ಧರ್ಮದಲ್ಲಿ ಅದರೆದೇ ಆದ ಕೆಲವು ನಿಯಮಗಳು ಅಂತ್ಯಕ್ರೀಯಗೆ ಇದ್ದೆ ಇರುತ್ತವೆ. ಕೆಲವೊಂದನ್ನು  ನಮ್ಮ ಹಿರಿಯರು ಮಾಡಿಕೊಂಡು ಬಂದರೆಂದು ಅನುಸರಿಸಿದರೆ, ಇನ್ನೂ ಕೆಲವೊಂದು ಪ್ರಸ್ತುತ ಸಮಾಜಕ್ಕೆ ವೈಜ್ಞಾನಿಕವಾಗಿ ಅವಶ್ಯಕವಾಗಿರುವಂತಹವು.
          ನಮ್ಮ ಹಿಂದೂ ಧರ್ಮದಲ್ಲಿ ಎರಡು ವಿಧದ ಅಂತ್ಯಸಂಸ್ಕಾರಗಳು ರೂಡಿಯಲ್ಲಿವೆ. ಒಂದು "ಅಗ್ನಿ ಸ್ಪರ್ಶ" ಇನ್ನೊಂದು "ಮಣ್ಣು ಮಾಡುವದು". ಅಂತ್ಯಕ್ರಿಯೆಯ ನಂತರ ಸ್ನಾನ,ವಿವಿಧ ಪೂಜೆಗಳು, ಹೀಗೆ ನಾನಾ ತರಹದ ಆಚರಣೆಗಳು ಇರುತ್ತವೆ.
         ಇ ಮೇಲಿನ ಆಚರಣೆಗಳ ಬಗ್ಗೆ ನನಗನಸಿದ ಕೆಲವು ಸಂಗತಿಗಳನ್ನು ಇಲ್ಲಿ ಹೇಳಲು ಇಷ್ಟಪಡುತ್ತೇನೆ -
         ಸ್ನಾನ:  ಸ್ಮಶಾನದಿಂದ ಬಂದ ಜನ ಸ್ನಾನ ಮಾಡದೆ ಮನೆಯೊಳಗೆ ಹೋಗಲ್ಲ.ಸ್ಮಶಾನದ ಪರಿಸರದಲ್ಲಿ ಇದ್ದಿರಬಹುದಾದ ಕ್ರಿಮೀ ಕೀಟಗಳು, ಸ್ಮೊಕ್ಷ್ಮಾನು ಜಂತುಗಳು  ಮನೆಯೊಳಗೆ ಸೇರಬಹುದೆಂದು ಸ್ನಾನ ಮಾಡಿಯೇ ಮನೆಗೆ ಪ್ರವೇಶ. ಇನ್ನೂ ಒಂದು ಸಂಗತಿ ಎಂದರೆ ಹತ್ತಿರದ ಸಂಬಂಧಿಕರಿಗೆ,ಒಂದು ಬಿಂದಿಗೆ ಬಿಸಿ ನೀರು ಮತ್ತೊಂದು ಬಿಂದಿಗೆ ತಣ್ಣೀರು ಸುರಿಯುತ್ತಾರೆ. ಅತ್ತು ಅತ್ತು ದೇಹದಲ್ಲಿ ರಕ್ತದೊತ್ತಡ ಹೆಚ್ಚು ಕಮ್ಮಿಯಾಗಿದ್ದಾರೆ, ಇ ರೀತಿ ಬಿಸಿ ನೀರು ಮತ್ತು ತಣ್ಣೀರನ್ನು ಹಾಕುವದರಿಂದ ಸಮತೋಲನಕ್ಕೆ ಬರುತ್ತದೆ.
        ಇನ್ನೂ ಸಂಸ್ಕಾರದ ಮಾರನೆಯದಿನ ಮನೆಯ ಕೆಲವು ಜನ ಬೆಳಿಗ್ಗೆ ಸ್ಮಶಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಸಂಸ್ಕಾರ ಮಾಡಿದ ಸ್ಥಳ ಸರಿಯಾಗಿದೇನೂ ಇಲ್ಲವೋ ಅಂತಾ ಪರಿಕ್ಷೀಸುವದ್ದಕ್ಕೊಸ್ಕರ ಇ ರೀತಿ ಮಾಡಿರಬಹುದು.
       ಹೆಣ್ಣುಮಗಳ ಗಂಡನೆನಾದ್ರು ತೀರಿ ಹೋಗಿದ್ರೆ, ಆಕೆಯ ತವರು ಮನೆಯವರು ಸ್ವಲ್ಪದಿನಕ್ಕೆ ಅಂತ ಅವಳನ್ನು ತವರು ಮನೆಗೆ ಕರೆದೊಕೊಂಡು ಹೋಗುತ್ತಾರೆ. ಇನ್ನೂ ತನಗೆ ಯಾರು ಇಲ್ಲ ಅನ್ನುವ ಒಂದು ಮಾನಸಿಕ ಭಾವನೆ ಬರಬಾರದು ಅಂತಾನೇ ಅನ್ನಿಸುತ್ತೇ ಇ ರೀತಿ ಮಾಡೋದಕ್ಕೆ.
      ಇ ತರಹದ ಇನ್ನೂ ಎಷ್ಟೂ ಅಂಶಗಳು, ಆಚರಣೆಗಳು ಇವೆ. ಆದರೆ ಅವುಗಳನ್ನು ಇಲ್ಲಿ ಬರಿಯೋದಕ್ಕೆ ಆಗ್ತಿಲ್ಲ....
 

Comments

  1. ನಾನು ನೋಡಿದ ಮೊದಲ ಹತ್ತಿರದ ಸಾವು ಅದು.. ನನ್ನ ನೆಚ್ಚಿನ ವ್ಯಕ್ತಿ.. ನಂಬಲಾಗಲಿಲ್ಲ.. ಆಗ ನಾನು ೫ ತಿಂಗಳು ಗರ್ಭಿಣಿ.. ನನ್ನ ಕಚೇರಿಗೆ ಕರೆ ಮಾಡಿ ತಿಳಿಸಿದರು.. ತಿಳಿಸಿ ನಾನು ಬರಬಾರದು ಎಂದು ತಾಕೀತು ಮಾಡಿದರು.. ನಾನು ಬಂದರೆ ಆತ್ಮ, ಭೂತ ಏನ್ ಏನೋ ಕಥೆಗಳು.. ನಾನು ಹಠ ಮಾಡಿ ನನ್ನ ತಾತ ಎಂದಿಗೂ ನನಗೆ ತೊಂದರೆ ಕೊಡರು.. ಯಾರು ತಡೆದರೂ ನಾನು ಬರುತ್ತೇನೆ.. ಕೊನೆಯದಾಗಿ ನೋಡುತ್ತೇನೆ ಎಂದೇ.. ಅಲ್ಲಿಗೆ ಹೋದಾಗ ತಾತ ಸುಮ್ಮನೆ ಮಲಗಿದ್ದರೆನೋ ಅನ್ನೋ ಹಾಗೆ ಇತ್ತು.. ಎದ್ದು ಬಂದ್ಯಾ ರಾಣಿ? ಅಂತಾರೇನೋ ಅಂತ ಕಾಯುತ್ತಿದ್ದೆ.. ಕಣ್ಣಲ್ಲಿ ನೀರು ಇಲ್ಲ.. ಮನಸಲ್ಲಿ ವಿಚಿತ್ರ ಮೌನ. ಯಾರನ್ನು ಮಾತಾಡಲಿಲ್ಲ.. ಹೋಗಿ ತಾತನ ಕೈ ಹಿಡಿದು ಕೂತೆ.. ಮುಟ್ಟಬೇಡ ಅಂತ ಯಾರೋ ಹೇಳಿದ ಹಾಗಿತ್ತು.. ನೀರೋ ಕಾಫಿನೋ ತಂದು ಕೊಟ್ಟ ಹಾಗಿತ್ತು..

    ಯಾವುದಕ್ಕೂ ನನ್ನ ತುಟಿ ಎರಡಾಗಳು ಒಪ್ಪಲಿಲ್ಲ..

    ನನ್ನ ಪತಿ ರಾಯರು ಎಳೆದುಕೊಂಡು ಹೋದರು.. ೨ ದಿನ ನನ್ನ ಮಾತು ನಿಂತು ಹೋಗಿತ್ತು.. ಎಲ್ಲಾ ಕಾರ್ಯಗಳು MECHANICAL ಆಗಿತ್ತು..

    ಭಯಾನಕ !

    ನೀವು ಯಾರೋ.. ನಂಗೆ ಗೊತ್ತಿಲ್ಲ.. ಆದರೆ ನಿಮ್ಮ ಲೇಖನ ನನ್ನ ಮನಸಿನ ಬಾವಿಗೆ ಜಿಗಿದು ಇಷ್ಟು ನೆನಪುಗಳನ್ನು ಹೊತ್ತು ತಂದಿದೆ..

    ಇನ್ನ ಬಹಳ ಕೆಟ್ಟ ಆಚರಣೆಗಳು ಇವೆ.. ಈಗ ಹಂಚಿಕೊಳ್ಳಲು ಮನಸು ಭಾರವಾಗಿದೆ.. ಮತ್ತೊಮ್ಮೆ ಬಂದು ಹೇಳುತ್ತೇನೆ..

    ಹೇಳೋದು ಮರೆತೇ.. ಚನ್ನಾಗಿ ಬರೆದಿದ್ದೀರ.. :)

    ReplyDelete
  2. thank u madam [i dont know your name so addressing as madam]
    ನಿಮ್ಮ ಅನಿಸಿಕೆಗಳನ್ನ ಹಂಚಿಕೊಂಡದಕ್ಕೆ ಧನ್ಯವಾದಗಳು ...
    -manju

    ReplyDelete

Post a Comment

Popular posts from this blog

ಹಲೋ ಮೇಡಂ ! ಚೆನ್ನಾಗಿದಿರಾ ?

ಹಲೋ !!! TeaYa ನಾ???

Whom to contact....???