ಮೂಕಜ್ಜಿಯ ಕನಸುಗಳು
ಲೇಖಕರು: ಡಾ||ಕೆ.ಶಿವರಾಂ ಕಾರಂತ.
ಇ ಪುಸ್ತಕದಲ್ಲಿ ಬರುವ ಮುಖ್ಯ ಪಾತ್ರ ಮೂಕಜ್ಜಿ [ಪೂರ್ಣ ಹೆಸರು ಮೂಕಾಂಬಿಕೆ ] ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಅಲ್ಪ ಸಮಯದಲ್ಲಿ ವಿಧವೆ ಪಟ್ಟ ಪಡೆದ ನಂತರ ತನ್ನ ತವರು ಮನೆಯಲ್ಲಿ ವಾಸಿಸುತ್ತಿರುತ್ತಾಳೆ.
ಇದು ಮೂಕಜ್ಜಿ ಮತ್ತು ನಾಣಿ ನಡುವೆ ನಡೆಯುವ ಸಂಭಾಷಣೆ.
ಮೂಕಜ್ಜಿ ಮತ್ತು ನಾಣಿ, ಸಂಪ್ರದಾಯ,ಆಚಾರ,ವಿಚಾರಗಳು, ಮಾನವ ಕುಲದ ವಿಕಾಸ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸುವಾಗ ಓದುಗನು ಇ ವಿಷಯಗಳ ಯೋಚಿಸುವ ಹಾಗೆ ಬರೆದಿದ್ದಾರೆ ಲೇಖಕರು. ಕೆಲವು ಮೌಡ್ಯಗಳ ಮೇಲೆ ಬೆಳಕುಚೆಲ್ಲಿದ್ದಾರೆ.
ಒಮ್ಮೆ ನಾಣಿ ಜೊತೆ ಚರ್ಚಿಸುವಾಗ ಮೂಕಜ್ಜಿ 'ಕೊಲ್ಲೂರು' ಏಕೆ ಆ ಹೆಸರು ಬಂತು ಅಂತಾ ತುಂಬಾ ಚೆನ್ನಾಗಿ ವಿವರಿಸುತ್ತಾಳೆ .
ಇದು ನಾನು ಓದಿದ ಮೊದಲ ಕೃತಿ. ತುಂಬಾ ಒಳ್ಳೆಯ ಪುಸ್ತಕ . ಸಮಯ ಸಿಕ್ಕಾಗ ಓದಿ.
Comments
Post a Comment