ಹಳೇ ನೆನಪುಗಳು:ಹೊಸ ವರ್ಷ

ಅಪ್ಪಾ ನಂಗೆ 10 ರೂಪಾಯಿ ಬೇಕು ... ಯಾಕೆ ಅಂತಾ ಕೇಳಿದ್ರು.
ಆಗಿನ್ನೂ ನಾನು ನಾಲ್ಕನೇ ತರಗತಿಲಿ ಓದ್ತಿದ್ದೆ .
ನಾಳೆ ಹೊಸಾ ವರ್ಷ, Sir ಗೆ greetings card ಮಾಡಿ ಕೊಡ್ತಿದಿವಿ ಅದಕ್ಕೆ ಅಂತಾ ಅಂದೆ.
ಆಯ್ತು ತೊಗೋ ಅಂತಾ ಜೇಬಿಂದ 10 ರೂಪಾಯಿ ತೆಗೆದುಕೊಟ್ರು . ಏನು ಮಾಡ್ತೀರಿ ಅಂತಾ ಕೇಳಿದ್ರು ..
ದಪ್ಪಾ ಪೇಪರ್ ನಲ್ಲಿ sketch pen ಇಂದ "ಹೊಸಾ ವರ್ಷದ ಹಾರ್ದಿಕ ಶುಭಾಶಯಗಳು 1995 " ಅಂತಾ ಬರೀತೀನಿ ಅಂದೆ.ಆಯ್ತು ದುಡ್ಡು ಜೋಪಾನ ಕಳ್ಕೊಬೇಡ, ಶಾಲೆ ಇಂದ ಬರ್ತಾ paper  ತೊಗೊಂಡ್ ಬಾ ಅಂದ್ರು 
ಅದರ ಹಿಂದಿನ ದಿನ ಗೆಳೆಯರೆಲ್ಲ ಸೇರಿ greeting card ಕೊಡೋನಾ ಅಂತಾ ಯೋಚಿಸಿದ್ವಿ .
ಸರಿ ಅಂತಾ ನಾನು ಶಾಲೆಗೆ ಹೋದೆ. ತುಂಬಾ ಹತ್ತಿರದ ಗೆಳೆಯರಿಗೆ ಮಾತ್ರ, ಲೇ ನೋಡು ಅಪ್ಪ 10 ಕೊಟ್ರು ಅಂತಾ ತೋರ್ಸಿ,ನೀನು ಏನ್ ಬರಿತಿಯ, ಹೆಂಗೆ ಬರಿತಿಯ, ಯಾವ ಯಾವ ಬಣ್ಣದ ಪೆನ್ use ಮಾಡ್ತಿಯಾ, ಅದು ಇದು ಅಂತಾ  ಕೇಳಿ ಸಂಜೆ ವಾಪಸ್ ಮನೆಗೆ ಬರುವಾಗ paper ಮತ್ತೆ sketch pen ತೊಗೊಂಡು ಹೋದೆ.
ಊಟಕ್ಕಿಂತ ಮುಂಚೆನೇ ನನಗೆ ತೋಚಿದ ರೀತಿಲಿ ಶುಭಾಶಯ ಸಂದೇಶ ಬರೆದು ಬಣ್ಣ ತುಂಬಿದೆ.  
ಮಲಗಬೇಕಿದ್ರೆ, ಬೇರೆ ಗೆಳೆಯರು ಯಾವತರಾ ಬರದಿರಬಹುದು ಅನ್ನೋ ಕುತೂಹಲ !!!!
ಬೆಳಿಗ್ಗೆ ಶಾಲೆಲಿ ಎಲ್ಲರೂ ತಮ್ಮ card ಅನ್ನ ತೋರ್ಸಿ ಲೇ ನೋಡು ನಾನು ಎಷ್ಟು ಚೆನ್ನಾಗಿ ಬರದಿದಿನಿ ಅಂತಾ ಹೇಳಿದ್ದೆ ಹೇಳಿದ್ದು.
ಒಬ್ಬರೆ ಹೋಗಿ sir ಗೆ card ಕೊಟ್ಟು ಶುಭಾಶಯ ಹೇಳಿದ್ವಿ. ಸರ್ ಗೆ ಕುಷಿ  ಆಯ್ತು ತುಂಬಾ ಚೆನ್ನಾಗಿ ಬರದಿದಿರಿ ಅಂತಾ ಅಂದ್ರು ನಮಗೂ ಕುಷಿ ಆಯ್ತು !!!!

ಈಗ ಮತ್ತೊಂದು ಹೊಸಾ ವರ್ಷ ಬಂದಿದೆ... ಎಲ್ಲರೂ ದೊಡ್ದವರಿಗಿದಾರೆ, ಜಾಸ್ತಿ ಜನ ಹಳೇ friends contact ಅಲ್ಲಿ ಇಲ್ಲ. ಆಗಿನ ತರಾ card ಮಾಡೋ ಆಸಕ್ತಿನು ಇಲ್ಲ ...!!!!

ಆದ್ರೆ ಆ ಹಳೇ ನೆನಪುಗಳು ಮಾತ್ರ ಇಗಲು ಹಚ್ಚ ಹಾಸಿರಾಗಿವೆ ...

ನನ್ನ ಎಲ್ಲ ಗೆಳೆಯರಿಗೂ ಹೊಸ ವರ್ಷದ ಶುಭಾಶಯಗಳು 

-ಮಂಜು


 

Comments

  1. ನಿನಗೂ ಹೊಸ ವರ್ಷದ ಹಾರ್ದಿಕ ಶುಭಾಶಯ :-)

    ReplyDelete

Post a Comment

Popular posts from this blog

ಹಲೋ ಮೇಡಂ ! ಚೆನ್ನಾಗಿದಿರಾ ?

Money is yours but Resources belongs to the Society ... Just think about it

ಹಲೋ !!! TeaYa ನಾ???