ನಮ್ಮ ಆಚರಣೆಗಳು-ಮಕರ ಸಂಕ್ರಾಂತಿ

           ನಮ್ಮ ಸಂಪ್ರದಾಯ ಸಂಸ್ಕೃತಿ ಎಲ್ಲಾ ಹಾಳಾಗಿಹೊಯ್ತು ... ಈಗಿನ ಹುಡುಗರಿಗೆ / ಹುಡುಗಿರಿಗೆ ಒಂಚೂರು ನಮ್ಮ ಆಚರಣೆ ಬಗ್ಗೆ ಆಸಕ್ತಿನೇ ಇಲ್ಲ ಅಂತ ಹಿರಿಯರು ಬೈಯೋದನ್ನಾ ಇ ಕಿವಿ ಇಂದ ಕೇಳಿ ಆ ಕಿವಿ ಇಂದ ಬಿಟ್ಟು ಬಿಟ್ಟಿರ್ತಿವಿ.
        ಆದರೆ ನಮ್ಮಲ್ಲಿ ಎಷ್ಟೋ ಜನಕ್ಕೆ ಇ ಆಚರಣೆಗಳ ವಿಶಿಷ್ಟತೆ, ಮಹತ್ವ ಗೊತ್ತಿಲ್ಲ. ಕೆಲವೊಂದು ಆಚರಣೆಗಳಿಗೆ ವೈಜ್ಞಾನಿಕ ಮಹತ್ವನೂ ಇದೆ .
          ಇಂತಹ ಸಂಪ್ರದಾಯಗಳನ್ನ ಕೇವಲ ಆಚರಣೆಗಳಂತೆ ನೋಡದೆ, ವೈಜ್ಞಾನಿಕವಾಗಿ ನೋಡಿದರೆ ಅವುಗಳ ಮಹತ್ವ ಇನ್ನು ಹೆಚ್ಚುತ್ತದೆ
         ನನಗೆ ಗೊತ್ತಿರುವಷ್ಟು ವಿಷಯವನ್ನ ಇ ಲೇಖನಗಳ ಮೂಲಖ ಹಂಚುವ ಒಂದು ಸಣ್ಣ ಪ್ರಯತ್ನ . ನಿಮ್ಮ ಅನಿಸಿಕೆಗಳು, ನಿಮ್ಮ ವಿಚಾರಗಳಿಗೆ ಸದಾ ಸ್ವಾಗತ :)

ಮಕರ ಸಂಕ್ರಾಂತಿಯ ಆಚರಣೆಗಳು:
         ಇ ಹಬ್ಬ ಚಳಿಗಾಲದ ಕೂನೆ ಭಾಗ ಮತ್ತು ಬೇಸಿಗೆಯ ಆರಂಭವನ್ನ ಸೂಚಿಸುತ್ತದೆ. ಸೂರ್ಯ ತನ್ನ ಪತವನ್ನ ಮಕರ ರಾಶಿಗೆ ಬದಲಿಸುತ್ತಾನೆ.
         ಸಂಕ್ರಾಂತಿಯಂದು ಜನ ಪರಸ್ಪರ ಎಳ್ಳುಬೆಲ್ಲ, ಕಬ್ಬು ಹಂಚಿಕೊಳ್ಳುತ್ತಾರೆ. ಇ ಎಳ್ಳು ಬೆಲ್ಲ, ಕಬ್ಬು ತಿನ್ನುವದರಿಂದ ನಮ್ಮ ದೇಹದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಕೊರೆಯುವ ಚಳಿ ಇಂದ ಕಳೆದು ಹೊದ ತೇವಾಂಶವನ್ನುಹೆಚ್ಚಿಸಲಿಕ್ಕೆ ಅಂತಾನೇ ನಮ್ಮ ಹಿರಿಯರು ಇ ಸಂಪ್ರದಾಯವನ್ನ ಆರಂಬಿಸಿದ್ದು ಅಂತಾ ಅನ್ನಸತ್ತೆ.

         ಇನ್ನು ರೈತರಿಗೆ ಇದು ಸುಗ್ಗಿಯ ಕಾಲ. ಬೆಳೆದ ಬೆಳೆಯನ್ನ ರಾಶಿಮಾಡುವ ಮುಂಚೆ ಪೂಜೆ ಮಾಡುತ್ತಾರೆ.ಎತ್ತುಗಳಿಗೆ ಸಿಂಗಾರ ಮಾಡಿ ವಿವಿಧ ಆಟಗಳಲ್ಲಿ ಬಾಗವಹಿಸುತ್ತಾರೆ.ಕುಟುಂಬ ಸಮೇತ ಹೂಲಕ್ಕೆ ಹೋಗಿ ಅಲ್ಲೇ ಊಟ ಮಾಡುತ್ತಾರೆ. ಇಷ್ಟು ದಿನ ಹೊಲ/ಗದ್ದೆ ಕೆಲಸದಲ್ಲಿ ಶ್ರಮಪಟ್ಟ ಜನ ಸ್ವಲ್ಪ ಮನರಂಜನೆ,ಆಟ ಅಂತಾ ಕಾಲ ಕಳೆಯುತ್ತಾರೆ. ಇದೆ ಸಂದರ್ಬದಲ್ಲಿ ಎತ್ತುಗಳ ಓಟ, ಎತ್ತುಗಳಿಂದ ಬೆಂಕಿಯನ್ನ ಹಾರಿಸುವ ಸಂಪ್ರದಾಯನು ಇದೆ.

          ಪುರಾಣಗಳ ಪ್ರಕಾರ ವಿಷ್ಣು ಅಸುರರನ್ನು ನಾಶಮಾಡಿದ ದಿನ. ಇದರಿಂದ ಸಂಕ್ರಾಂತಿಯನ್ನ ಒಳ್ಳೆ ದಿನಗಳ ಆರಂಭ ಅಂತ ನಂಬಿಕೆ ಇದೆ. ಎಷ್ಟೇ ವೈರಿಗಳಾಗಿದ್ದವರು ಸಹ ಅವತ್ತಿನ ದಿನ ಪರಸ್ಪರ ಎಳ್ಳು ಬೆಲ್ಲ ಹಂಚಿ ವೈಷಮ್ಯ ಮರೆಯುತ್ತಾರೆ.
        ಇ ಹಬ್ಬದಲ್ಲಿರುವ ಆಚರಣೆಗಳೆಲ್ಲ ಒಂದಲ್ಲ ಒಂದು ರೀತಿಯಿಂದ ವೈಜ್ಞಾನಿಕವಾಗಿ ನಮಗೆ ಅರಿವಿಲ್ಲದೆ ದೇಹವನ್ನ ಬೇಸಿಗೆಗೆ ಸಜ್ಜಾಗಿಸುತ್ತವೆ. 

Comments

Popular posts from this blog

ಹಲೋ ಮೇಡಂ ! ಚೆನ್ನಾಗಿದಿರಾ ?

Money is yours but Resources belongs to the Society ... Just think about it

ಹಲೋ !!! TeaYa ನಾ???