World Cup : ನೆನಪಿನ ಅಂಗಳದಿಂದ !!!
Photo courtesy: Internet
Edited by Me .
ಕ್ರಿಕೆಟ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲಾ ? ಕ್ರಿಕೆಟ್ ಬಗ್ಗೆ ಏನು ಗೊತ್ತಿಲ್ಲದವರು ಸಹ ಪಂದ್ಯ ನಡಿತಿದ್ರೆ ಸ್ಕೋರ್ ಎಷ್ಟು? ಅಂತಾ ಎಷ್ಟೋ ಸಲ ಕೇಳಿರ್ತಾರೆ ಅಲ್ವಾ?ಇನ್ನೂ ಭಾರತ ಮತ್ತು ಪಾಕಿಸ್ತಾನ ನಡುವೆ ಎಂದರು ಪಂದ್ಯ ಇದ್ರೆ ಅದರ ಮಾತೆ ಬೇರೆ, ಕ್ರಿಕೆಟ್ ಕಂಡ್ರೆ ಆಗಲ್ಲ ಅನ್ನೋರು ಸಹ ಉತ್ಸುಕರಾಗಿರ್ತಾರೆ.
ಚಿಕ್ಕಂದಿನಿಂದ ನನಗೆ ಕ್ರಿಕೆಟ್ ಬಗ್ಗೆ ಆಸಕ್ತಿ .ಚಿಕ್ಕಂದಿನಲ್ಲಿ ನಾನು ಹೆಚ್ಚಿನ ಸಮಯ ಕಳೆದದ್ದು ನನ್ನ ಅಜ್ಜನ ಮನೇಲಿ. 1983 ರಲ್ಲಿ ಭಾರತ ವರ್ಲ್ಡ್ ಕಪ್ ನ ಫೈನಲ್ ಪ್ರವೇಶಿಸಿದಾಗ ಅಜ್ಜ ಟಿವಿ ತೊಗೊಂಡಿದ್ದರಂತೆ. ನನ್ನ ಮಾವ ದಿನಾಲೂ ಕ್ರಿಕೆಟ್ ಆಡೋಕೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗ್ತಿದ್ರು. ಆಮೇಲೆ ಒಂದು tournament ಅಲ್ಲಿ ಬಾಲ್ ಬಡಿದು ಕಾಲಿಗೆ ಗಾಯ ಮಾಡಿಕೊಂಡಾಗ,ಅಜ್ಜಿ ಸರಿಯಾಗಿ ಮಂಗಳಾರತಿ ಮಾಡಿದಮೇಲೆ ಅವರ ಕ್ರಿಕೆಟ್ ಆಡೋ ಹುಚ್ಚು ಕಮ್ಮಿ ಆಯ್ತು.
ನಮ್ಮ ಶಾಲೆಲಿ ಆಟದ ಅವಧಿಯಲ್ಲಿ ನಮ್ಮ ಸರ್ ಏನಾದ್ರು ಇದ್ರೆ ಮಾತ್ರ ನಾವು ಅವರು ಹೇಳಿದ್ದ ಆಟ ಆಡ್ತಾ ಇದ್ವಿ. ಒಂದು ವೇಳೆ ಸರ್ "ನಿಮಗೇನು ಬೇಕು ಆಡಕೊಳ್ರಿ" ಅಂದ್ರೆ ನಮಗೆ ಗೊತ್ತಿರೋದು ಒಂದೇ ಆಟ ಏನೋ ಅನ್ನೋ ಹಾಗೆ ನಮ್ಮ default choice ಕ್ರಿಕೆಟ್ ಆಗಿರುತಿತ್ತು.ನಮ್ಮ ಹತ್ರ ಸರಿಯಾದ bat ಇಲ್ಲದಿದ್ರು ಅಲ್ಲೇ ಸಿಗೋ ಒಂದು ಕಟ್ಟಿಗೆನೇ ನಮ್ಮ bat !!! ಇನ್ನೂ ಕೆಲವೊಮ್ಮೆ ಯಾವುದೋ ಕಾರಣಕ್ಕೆ ಶಾಲೆಗೆ ಅರ್ಧ ರಜಾ ಸಿಕ್ರಂತೂ ಮುಗಿತು ನಾವು ಮಾತ್ರ ಇನ್ನರ್ಧ ದಿನ ಕ್ರಿಕೆಟ್ ಆಡಿನೇ ಮನೆಗೆ ಹೋಗ್ತಿದ್ವಿ..
ಬರೀ ಶಾಲೆಲಿ ಅಷ್ಟೇ ಅಲ್ಲ ಮನೆ ಹತ್ರಾ ನಾನು ಆಡ್ತಿದ್ದಿದ್ದು ಅದನ್ನೇ. ನಮ್ಮ ಕೈಗೆ ಸಿಕ್ಕು ಕ್ರಿಕೆಟ್ ನ ನಿಯಮಗಳೇ ಬದಲಾಗಿದ್ವು. ಜನ ಜಾಸ್ತಿ ಇದ್ರೆ ಮಾತ್ರ full pledged ಕ್ರಿಕೆಟ್ ಆಡ್ತಿದ್ದದ್ದು, ಇಲ್ಲ ಅಂದ್ರೆ ಬರೀ off side ಮಾತ್ರ ರನ್, leg side ಮೂರು ಸಲ ಹೊಡದ್ರೆ ಔಟ್ !!! ಹೀಗೆ ಅನೇಕ ನಿಯಮಗಳು.. ರವಿವಾರ ಅಂತು ಮುಗಿತು, ಅಮ್ಮನಿಗೆ ಬೈದು ಬೈದು ಸುಸ್ತಾದರೆ ನನಗೆ ಆಟ ಆಡಿ ಸುಸ್ತು ..!!!
ನನಗೆ ನೆನಪಿರುವ ಮೊದಲ ಕ್ರಿಕೆಟ್ ವರ್ಲ್ಡ್ ಕಪ್ ಅಂದ್ರೆ ೧೯೯೬ರದು. ಭಾರತ,ಪಾಕಿಸ್ತಾನ ಮತ್ತು ಶ್ರೀಲಂಕ ಜಂಟಿ ಆಗಿ ಆಯೋಜಿಸಿದ ಪಂದ್ಯಾವಳಿ. ಭಾರತ ಸೆಮಿ ಫೈನಲ್ ನಲ್ಲಿ ಶ್ರಿಲಂಕ ವಿರುಧ್ದ ಆಡಿತ್ತು. ಮನೇಲಿ ಆಗ ಬರೀ ನ್ಯಾಷನಲ್ ಚಾನೆಲ್ ಒಂದೇ ಬರ್ತಿತ್ತು. ಆ ಪಂದ್ಯ Day and night ಆಗಿದ್ದರಿಂದ ನೇರ ಪ್ರಸಾರದ ವೇಳೆ ನ್ಯಾಷನಲ್ ಚಾನೆಲ್ ಅಲ್ಲಿ ಪ್ರಸಾರ ಆಗುವ ವಾರ್ತೆ, ಎಲ್ಲರನ್ನು ಅರ್ಧಗಂಟೆ ತುಂಬಾ ಉತ್ಸುಕರನ್ನಾಗಿಸಿತ್ತು. ವಾರ್ತೆ ಮುಗಿದು ಪಂದ್ಯದ ನೇರ ಪ್ರಸಾರ ಆರಂಭವಾದಾಗ, ಭಾರತ ಸೋಲಿನ ದಾರಿಯಲ್ಲಿ ತಿರುಗಿ ಬಾರದಷ್ಟು ದೂರ ಹೋಗಿತ್ತು. ತುಂಬಾ ಬೇಜಾರಯ್ತು ಆ ದಿನ.
ಅದಾದ ಮೇಲೆ ಬಂದದ್ದು ೧೯೯೯ ವರ್ಲ್ಡ್ ಕಪ್. ಭಾರತದ ಪಾಲಿಗೆ ಅತಿ ಕೆಟ್ಟ ವರ್ಲ್ಡ್ ಕಪ್ ಅಂತಾ ಅನ್ನಬಹುದು.೨೦೦೩ರ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದರು ಕಪ್ ಗೆಲ್ಲುವಲ್ಲಿ ವಿಫಲವಾಯಿತು . ೨೦೦೭ರ ಸ್ಥಿತಿ ಸಹ ೧೯೯೯ರ ಹಾಗೆನೇ, nock out round ಗೂ ಪ್ರವೇಶಿಸಲಿಲ್ಲ.ಆದರೆ ಅದೇ ವರ್ಷ [೨೦೦೭] ನಡೆದ ಪ್ರಥಮ T20 ವರ್ಲ್ಡ್ ಕಪ್ ಅನ್ನು ಗೆದ್ದ ಸಾಧನೆ ಮಾಡಿತು.
ಇದೆ ಫೆಬ್ರುವರಿ ೧೯ರಿಂದ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿ ಶುರು ಆಗ್ತಾ ಇದೆ. ಮತ್ತೊಮ್ಮೆ ವರ್ಲ್ಡ್ ಕಪ್ ಗೆಲ್ಲುವ ಅವಕಾಶ ಭಾರತಕ್ಕೆ. ಅನುಭವಿ ಹಿರಿಯ ಆಟಗಾರರು ಮತ್ತು ಉತ್ಸಾಹಿ ಯುವ ಆಟಗಾರರಿರುವ ನಮ್ಮ ತಂಡ, ಸ್ವದೇಶದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕಪ್ ಗೆಲ್ಲುವ favorites ...
ಬಹುತೇಕ ಕ್ರಿಕೆಟ್ ನ ಎಲ್ಲಾ ಧಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ ಕ್ರಿಕೆಟ್ ಮಾಂತ್ರಿಕ "ಸಚಿನ್ ರಮೇಶ್ ತೆಂಡೂಲ್ಕರ್" ಗೆ ಇದು ಕೊನೆಯ ವರ್ಲ್ಡ್ ಕಪ್. ಇ ವರ್ಲ್ಡ್ ಕಪ್ ನ ಫೈನಲ್ ಪಂದ್ಯ ಇರುವದು ಮುಂಬೈನಲ್ಲಿ .ಒಂದು ವೇಳೆ ಭಾರತ ಫೈನಲ್ ಪ್ರವೇಶಿಸಿ ಕಪ್ ಗೆದ್ದರೆ ಸಚಿನ್ ಗೆ ಇದಕ್ಕಿಂತ ಒಳ್ಳೆ ಉಡುಗೊರೆ ಬೇರೆ ಏನಿದೇ ಅಲ್ವಾ ?
ಭಾರತ ತಂಡಕ್ಕೆ ಶುಭವಾಗಲಿ....
Comments
Post a Comment