ನನ್ನವಳು !!!

photo courtesy: Internet 

          2008 ಸೆಪ್ಟೆಂಬರ್, ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷ ಆಗಿತ್ತು .  ನಾನು ಅವಳನ್ನ ಮೊದಲಸಲ ನೋಡಿದ್ದು internet ನಲ್ಲಿ ... ನನಗೆ ಯಾಕೋ ಏನೋ ತುಂಬಾ ಹಿಡ್ಸಿದ್ಲು. ಅವಳ ಆ ಮುದ್ದು ಮುಖ, ತಿಕ್ಷ್ಣ ಕಣ್ಣು, ಆ ನಾಜುಕತೆ ಹೀಗೆ ಏನೇನೊ...ಆಮೇಲೆ ಸುಮಾರು ಒಂದು ತಿಂಗಳವರೆಗೆ ಯೋಚಿಸಿದೆ . ಇದೆಲ್ಲ ಈಗ ಬೇಕಾ? ಇನ್ನೂ ಈಗ ಒಂದು ವರ್ಷ ಆಯ್ತು ಕೆಲ್ಸಕ್ಕೆ ಸೇರಿ. ಒಂದು ಸರಿಯಾಗಿ ನೆಲೇನು ಕಂಡಕೊಂಡಿಲ್ಲಾ, ಒಂದು ವರ್ಷದಲ್ಲಿ ಗಳಸಿದ್ದಾದ್ರು ಎಷ್ಟು ?.
        ನನ್ನ ಫ್ರೆಂಡ್ಸ್ ಮತ್ತು ರೂಂ ಮೇಟ್ಸ್ ಗಳಿಗೆ ವಿಷಯ ಹೇಳಿದಾಗ ಅವರು ಸಹಜವಾಗಿಯೇ ಖುಷಿ ಪಟ್ಟಿದ್ರು 'You carry on buddy'  ಅಂತಾ ಪ್ರೋತ್ಸಾಹ ಬೇರೆ ಸಿಕ್ತು. ಏನೋ ಮಾಡಿ ಅವಳನ್ನ ಪಡದದ್ದು ಆಯ್ತು...
        ದೀಪಾವಳಿಗೆ ಅವಳನ್ನ ಮನೆಗೆ  ಕರೆದುಕೊಂಡು ಹೋದೆ. ಅನ್ನುಕೊಂಡಹಾಗೆ ಮನೆಯಲ್ಲಿ ಅಮ್ಮ ಬೇಜಾರದ್ರೆ, ಅಪ್ಪ, ಈಗ ಇದೆಲ್ಲ ಬೇಕಿತ್ತಾ ನಿನಗೆ ಅಂತಾ ಬೈದ್ರು?? .. ಆದ್ರೆ ನನ್ನ ತಂಗಿ ಮತ್ತು ತಮ್ಮ ಮಾತ್ರ ಫುಲ್ ಖುಶ್...!!!!. ಅದು ಇದು ಅಂತಾ ಏನೇನೊ ಹೇಳಿ ಅಪ್ಪ ಅಮ್ಮನ್ನ ಸಮಾಧಾನ ಪಡಿಸಿದೆ. ಆಮೇಲೆ ಎಲ್ಲಾ normal ..
        ನಾನು ಯಾವದೇ ಟ್ರಿಪ್ ಗೆ ಹೋಗಲಿ ಅಥವಾ ಯಾವುದೇ ಊರಿಗೆ ಹೋದರು ನನ್ನ ಜೊತೆಗಾತಿ ಆದಳು ಅವಳು.
ನಾವು ಮೊದಲ ಟ್ರಿಪ್ ಅಂತಾ ಹೋಗಿದ್ದು ಮಡಿಕೇರಿಗೆ.ಆ ಆಹ್ಲಾದಕರ ವಾತಾವರಣ, ಪ್ರಕೃತಿಯ ಆ ಸೌಂದರ್ಯ,ಎಲ್ಲವನ್ನು  ನಾನು ಅವಳ ಕಣ್ಣುಗಳಿಂದನೇ ನೋಡೋಕೆ ಪ್ರಯತ್ನಿಸಿದೆ.ಅವಳ ಕಣ್ಣುಗಳು ಎಷ್ಟು ತೀಕ್ಷ್ಣ ಅಂದ್ರೆ ನನಗೆ ಕಾಣದ ಅತಿ ಸಣ್ಣ ವಸ್ತುಗಳನ್ನೂ ಅವಳ ನೋಡಬಲ್ಲಳು.
        ಅದು ಯಾರ ಕಣ್ಣು ಬಿತ್ತೋ ಏನೋ, ಅವತ್ತು ತಲಕಾವೇರಿಯ ಬೆಟ್ಟದಿಂದ ಇಳಿತಿರಬೇಕಾದ್ರೆ ಅವಳು ಜಾರಿ ಬಿದ್ದು ಬಿಟ್ಟಳು ..
ಬೆಂಗಳೊರಿಗೆ ಬಂದ ಮೇಲೆ ಅವಳನ್ನ ಒಂದು ವಾರ ಆಸ್ಪತ್ರೆಗೆ ಸೇರಿಸಿದ್ದು ಆಯ್ತು  :(
       ಅದಾದಮೇಲೆ ಸುಮಾರು  ಊರುಗಳನ್ನ ಅವಳೊಟ್ಟಿಗೆ ಸುತ್ತಿದ್ದು ಆಯ್ತು. Cricket match, office functions , ಏರ್ ಪೋರ್ಟ್, ಅಂತಾ ಬೆಂಗಳೂರನ್ನು ಸುತ್ತಿದ್ವಿ ....!!!
       ಈಗ ಅಮ್ಮನು ಬೇಜಾರಾಗಿಲ್ಲ .. ನಾನು ಊರಿಗೆ ಬರ್ತಿದೀನಿ ಅಂದ್ರೆ, ಅವಳನ್ನು ಕರ್ಕೊಂಡು ಬಾ ಮರಿಬೇಡ ಅಂತಾರೆ .. :). ಯಾವುದೇ ಹಬ್ಬಕ್ಕೆ/ಕಾರ್ಯಕ್ರಮಗಳಿಗೆ ಅಂತಾ ಊರಿಗೆ ಹೋದರು ಅವಳು ನನ್ನ ಜೊತೆ ಹಾಜರ್!!!. ಅವಳನ್ನ ಕಂಡ್ರೆ ಈಗ ಮನೆಯಲ್ಲಿ ಎಲ್ಲರಿಗೂ ಇಷ್ಟ.
ಅಯ್ಯೋ, ಇವನು ಯಾರ ಬಗ್ಗೆ ಹೇಳ್ತಿದಾನೆ ಅಂತಾ ತಲೆ ಕೇಡಿಸಿಕೊಳ್ಳಬೇಡಿ. ನಾನು ಇಷ್ಟೊತ್ತು ಹೇಳಿದ್ದು ನನ್ನ ಪ್ರೀತಿಯ ಕ್ಯಾಮೆರಾ ಬಗ್ಗೆ.  
ನನ್ನವಳ ಕಣ್ಣುಗಳಿಂದ ಸೆರೆ ಹಿಡಿದ ಕೆಲವು ಫೋಟೋಗಳು ಇಲ್ಲಿವೆ.ನಿಮ್ಮ ಅನಿಸಿಕೆಗಳನ್ನು ತಿಳಿಸಲು ಮರೆಯಬೇಡಿ..
Photo Gallery Link 

Comments

  1. ಮಂಜುನಾಥ್ ಸೂ್ಪರ್ ಸಸ್ಪೆನ್ಸ್...ಹಹಹ ಅವಳ ಕಣ್ಣಿನಲ್ಲೇ ನೋಡುತ್ತಿದ್ದೆ..ಅವಳ ಕಣ್ಣೆಷ್ಟು ತೀಕ್ಷ್ಣ,,,ಕ್ಷಣಕ್ಕೆ ಏನು ಕೊನೆಗೂ...ನೀವು ಹೇಳದಿದ್ದರೆ ಅದು ಅವಳೇ ಎಂದುಕೊಳ್ಳುತ್ತಿದ್ದೆ....ಹಹಹ ಚನಾಗಿದೆ ಚಿಕ್ಕ ಮತ್ತು ಚಕಿತಮಾಡುವ ಲೇಖನ

    ReplyDelete
  2. ಧನ್ಯವಾದಗಳು ಜಲನಯನ ಅವರೇ .. :)
    ಇ ತರಹದ ಲೇಖನ ಬರೆದದ್ದು ಇದೇ ಮೊದಲಸಲ ..

    ReplyDelete
  3. Super Manju, Tumba tumba chennagidhe ninna lekhana matte avalu kuda chennagidhaale kano :)

    ReplyDelete

Post a Comment

Popular posts from this blog

ಹಲೋ ಮೇಡಂ ! ಚೆನ್ನಾಗಿದಿರಾ ?

Money is yours but Resources belongs to the Society ... Just think about it

ಹಲೋ !!! TeaYa ನಾ???