ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ .. :)

ಜೀವನ ಒಂದು ಹೋರಾಟ.ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ.ಬೆಚ್ಚಗೆ ತಾಯಿಯ ಗರ್ಭದಲ್ಲಿ ಇದ್ದ ಮಗು ಜನಿಸಿದಾಗ ಅಳುವುದರೊಂದಿಗೆ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತದೆ .ಮೊದಲ ದಿನ ಶಾಲೆಗೆ ಹೋದ ಮಗು ಏನನ್ನೋ ಕಳೆದುಕೊಂಡವರ ಹಾಗೆ ವರ್ತಿಸುತ್ತದೆ. ಕಾಲ ಕ್ರಮೇಣ ಶಾಲೆಯ ಪರಿಸರವನ್ನು ರೂಡಿ ಮಾಡಿಕೊಂಡು ಬಿಡುತ್ತದೆ.ಕಾಲೇಜ್ ಟೈಮ್ ಅಲ್ಲಿ ಆರಾಮಾಗಿ ಎದ್ದು ಮೊದಲ period ಬಂಕ್ ಮಾಡಿ,ತಿಂಡಿ ತಿಂದು ಎರಡನೇ period ಗೆ ಹೋಗುವ ಹುಡುಗ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಿದಾಗ ಬದಲಾಗಿರ್ತಾನೆ ಅಥವಾ ಜವಾಬ್ದಾರಿ ಅವರನ್ನು ಬದಲಾಯಿಸಿರತ್ತೆ . Cab ಪಿಕ್ ಅಪ್ ಟೈಮ್ ಬೆಳಿಗ್ಗೆ 7 ಘಂಟೆ ಎಂದರೆ 6 ಘಂಟೆಗೆ ಎದ್ದು ರೆಡಿ ಆಗ್ತಾನೆ. ಇನ್ನೊಂದು ರೀತಿಯಲ್ಲಿ ಹೇಳೋದಾದರೆ ಅವನು ಹೊಸ ಟೈಮ್ ಗೆ ಅಡ್ಜಸ್ಟ್ ಆಗಿಬಿಡ್ತಾನೆ.
ಹುಟ್ಟಿನಿಂದ,ಅಮ್ಮ ಅಪ್ಪ ಆರೈಕೆಯಲ್ಲಿ ಬೆಳೆದ ಮುದ್ದಿನ ಮಗಳು, ತಮ್ಮನ ಅಕ್ಕರೆ , ಅಣ್ಣನ ವಾತ್ಸಲ್ಯ ಎಲ್ಲವನ್ನು ಬಿಟ್ಟು ಮದುವೆಯ ನಂತರ ಇನ್ನೊಂದು ಮನೆಗೆ ಹೋಗಿ ಹೊಂದಿಕೊಳ್ಳುವದಿದೆಯಲ್ಲ ಅದು ತುಂಬ ಕಷ್ಟ....
ಇದೆ ತರಹ ನಾವು ಜೀವನದಲ್ಲಿ ಎಸ್ಟೊಂದು ಪರಿಸ್ಥಿತಿಗಳಿಗೆ ನಮಗೆ ತಿಳಿಯದೆ ಹೊಂದಿಕೊಂಡು ಬಿಟ್ಟಿರುತ್ತೇವೆ. ಇ ತರಹದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಜೀವನವೇ ಹಾಗೆ ಪ್ರತಿಯೊಬ್ಬರನ್ನು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಜೀವನ ಕಲಿಸತ್ತೆ ನಾವು ಕಲಿಯಬೇಕು ..... ಅಲ್ವಾ...?
ಇದು ಕನ್ನಡದಲ್ಲಿ ನನ್ನ ಮೊದಲ ಲೇಖನ. ಏನಾದರು ತಪ್ಪಾಗಿದ್ದಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ... :)

Comments

Popular posts from this blog

ಹಲೋ ಮೇಡಂ ! ಚೆನ್ನಾಗಿದಿರಾ ?

Money is yours but Resources belongs to the Society ... Just think about it

ಹಲೋ !!! TeaYa ನಾ???