My First Pen...
ಮೊನ್ನೆ code ಅಲ್ಲಿರೋ bug ಗೆ fix ಯೋಚಿಸುತ್ತಾ ಕೀ ಬೋರ್ಡ್ ಕುಟ್ಟುತಿರಬೇಕಾದ್ರೆ ಔಟ್ಲುಕ್ one new message ಅಂತ ತೋರಿಸ್ತು, ಸ್ವಲ್ಪ relax ಆಗುವ ಅಂತ ಔಟ್ಲುಕ್ open ಮಾಡ್ದೆ. ನನ್ನ friend ಕಳಿಸಿದ "Ink stained Finger" ಅನ್ನೋ message ಓದುತ್ತಿದಂತೆ ನನ್ನ ಮನಸ್ಸು 15 ವರುಷಗಳ ಹಿಂದೆ ಸರಿತು... ನಾವೆಲ್ಲ 3 ನೇ class ವರೆಗೂ slate ನ್ನೇ ಬಳಸಿದ್ದು. ಆಗ ಶಾಲೆಗೆ ಏನಾದ್ರು ರಜೆ ಅಂತ ಗೊತ್ತಾದ್ರೆ "ಪಾಠಿ ಮೇಲೆ ಪಾಠಿ ನಮ್ಮ ಸಾಲಿ [ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಸೂಟಿ ಅಂದ್ರೆ ರಜೆ]" ಅಂತ ಕುಣಿದಾಡಿದ್ದು ನೆನಪಾಗಿ ನಗು ಬಂತು.... 3 ನೇ ತರಗತಿಗೆ ನಾನು ಮೊದಲ Pen ಬಳಸಿದ್ದು... ಆವಾಗಲೇ ಮೊದಲ ಪರೀಕ್ಷೆ paper ನಲ್ಲಿ ಬರೆದಿದ್ದು ... ಅಲ್ಲಿಯವರೆಗೆ ಬರಿ ಮೌಖಿಖ ಪರೀಕ್ಷೆ ಮಾತ್ರ ಇತ್ತು. ಅಮ್ಮ ನನ್ನ ಅಕ್ಷರ ನೋಡಿ, "ಏನೋ ಇದು ಕಾಗೆ ಗುಬ್ಬಚಿ ಕಾಲು ತರಹ ಬರಿತಿಯಾ" ಅಂತ ಬೈದು ತಿದ್ದತಾ ಇದ್ದರು. ಆವಾಗಲೇ ಅಪ್ಪ ತೊಗೋ ಇ ಇಂಕ್ ಪೆನ್ನನ , ಇದರಿಂದ ಬರೆದು ನೋಡು ಅಂತ ಮೊದಲ ಸಲ ನನ್ನ ಕೈಗೆ ink pen ಕೊಟ್ಟಿದ್ರು. ಏನೋ ಸ್ವಲ್ಪ ಅಕ್ಷರ ಸುದಾರಿಸಿತಾದ್ರು , ಹೇಳಿಕೊಳ್ಳು ಹಾಗೆ ಏನು ವ್ಯತ್ಯಾಸ ಆಗ್ಲಿಲ್ಲಾ. ಆದ್ರೆ ಆವಾಗಿನಿಂದ ನಾನು ink pen ಉಪಯೂಗಿಸೋಕೆ ಶುರು ಮಾಡಿದ್ದು. ಆದ್ರೆ ಅಮ್ಮನ ಬೈಗುಳ ಹೆಚ್ಚಿತೇ ಹೊರತು ಕಮ್ಮಿ ಆಗಲಿಲ್ಲ. ಕೆಲವೊಂದು ಸಲ ಅಂಗಿ ಮೇಲೆ ಮ...