Posts

Showing posts from September, 2011

ಹಲೋ !!! TeaYa ನಾ???

Image
       ಬಿಡು ಮಗಾ ಅವಳು ನಿನಗೆ message ಮಾಡಲ್ಲ ಅಂತಾ ಕುಮಾರ ಹರಿ ಗೆ ಹೇಳಿದ. ನಾವೆಲ್ಲಾ 2nd period ನಡಿಲಿಲ್ಲ ಅಂತಾ ನಮ್ಮ so called ಸೋಮಾರಿ ಕಟ್ಟೆ ಹತ್ರ ಕೂತು ಹರಟೆ ಹೊಡಿತಿದ್ವಿ. ಆದ್ರೆ ಹರಿ ತುಂಬಾ ಬೇಜಾರಾಗಿದ್ದ. ಕುಮಾರ ಅವಳ ಬಗ್ಗೆ ಹೇಳಿದಾಗ ಅಲ್ಲಿ ಒಂದು ಕ್ಷಣ ಮೌನ.                                                                        *****        ಆಗಷ್ಟೇ mobile ಕ್ರಾಂತಿ ಶುರು ಆಗಿತ್ತು. ನಮ್ಮಲ್ಲಿ ಬೆರಳೆಣಿಕೆ ಅಸ್ಟು ಜನರಲ್ಲಿ ಮಾತ್ರ ಮೊಬೈಲ್ ಇತ್ತು.ಅವತ್ತು ಹರಿ full excite ಆಗಿ ಮಗಾ spice call rate 10 ಪೈಸೆ ಪ್ರತಿ ನಿಮಿಷಕ್ಕೆ ಮತ್ತೆ ನೂರು message free ಪ್ರತಿ ದಿನಕ್ಕೆ ಅಂತಾ ಕುಮಾರನಿಗೆ ಹೇಳ್ತಿದ್ದಾ. ನಾವೆಲ್ಲಾ ಹೌದೇನೋ ?? ಅಂತಾ ಪಿಳಿ ಪಿಳಿ ಕಣ್ಣು ಬಿಟ್ಟಕೊಂಡು ಅವನ ಹೊಸ ಮೊಬೈಲ್ ನೋಡ್ತಿದ್ವಿ. ಹರಿ,ಪ್ರಕಾಶ,ನಂದನ,ಕುಮಾರ,ಮತ್ತೆ ಮುನ್ನ ತುಂಬಾ close friends.  ಸುಮಾರು ಒಂದು ತಿಂಗಳ ನಂತರ ಹರಿ ಗೆ ಒಂದು unknown number ಇಂದ ಮೆಸೇಜ್ ಬಂತು. ಅದು ಏನಪ್...